ಮನೆ ಶಿವಮೊಗ್ಗ ಬಿಜೆಪಿ ಸೇರ್ಪಡೆಗಾಗಿ ಕೆ.ಎಸ್.ಈಶ್ವರಪ್ಪರಿಂದ ಕಾಂಗ್ರೆಸ್- ಡಿಕೆಶಿ ಟೀಕೆ: ಆರೋಪಿಸಿದ ಆರ್, ಮೋಹನ್..!!

ಬಿಜೆಪಿ ಸೇರ್ಪಡೆಗಾಗಿ ಕೆ.ಎಸ್.ಈಶ್ವರಪ್ಪರಿಂದ ಕಾಂಗ್ರೆಸ್- ಡಿಕೆಶಿ ಟೀಕೆ: ಆರೋಪಿಸಿದ ಆರ್, ಮೋಹನ್..!!

81
0

ಶಿವಮೊಗ್ಗ:

ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟ ಬಳಿಕ ರಾಜಕೀಯ ಸ್ಥಾನಮಾನ ಕಳೆದುಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ನವರು ಮರಳಿ ಆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಅಭಿಲಾಷೆಯಿಂದ ರಾಜ್ಯ ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಅವರ ವಿರುದ್ಧಮನ ಬಂದಂತೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪ ದವಾಗಿದೆ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಮತ್ತು ಡಿಕೆಶಿ ಅವರ ನ್ನು ಟೀಕಿಸಿದರೆ ಬಿಜೆಪಿ ಸೇರ್ಪಡೆ ಗೊಳ್ಳಲು ಅವಕಾಶ ಸಿಗಬಹುದು ಎಂಬ ಕಾರಣಕ್ಕಾಗಿ ಏನೋ ಎಂಬಂತೆ ಈಶ್ವರಪ್ಪ ಮಾತನಾಡುತ್ತಿ ದ್ದಾರೆ. ಇವರ ಹೇಳಿಕೆಗಳು ಹಾ ಸ್ಯಾಸ್ಪದ ಹಾಗೂ ಬಾಲಿಶವಾಗಿವೆ.

ತಮ್ಮ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿ ಸಲು ಹರಸಾಹಸಪಡುತ್ತಿರುವ ಈಶ್ವರಪ್ಪ ನವರು ಬಿಜೆಪಿ ಸೇರ್ಪಡೆಗೆ ಶತಪ್ರಯತ್ನ ಮಾಡುತ್ತಿರುವಂತೆ ಕಂಡು ಬರುತ್ತಿದೆ. ತಮ್ಮ ಮಕ್ಕಳ ವಯಸ್ಸಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಮುಂದೆ ಅಂಗಾಲಾಚುವಂತಹ ಪರಿಸ್ಥಿತಿ ತಂದು ಕೊಂಡಿದ್ದಾರೆ.

ಈಶ್ವರಪ್ಪ ಎಂತಹ ಮಹಾನ್ ಘನಂದಾರಿ ನಾಯಕರು ಎಂಬುವು ದನ್ನು ಕಳೆದ ಲೋಕಸಭಾ ಚುಣಾ ವಣಾ ಫಲಿತಾಂಶ ಸಾಬೀತು ಪಡಿಸಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದ್ದು, 2028ರಸಾರ್ವತ್ರಿಕ ಚುನಾವಣೆಯಲ್ಲೂ ಸಹ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದೆಂಬ ವಾತಾ ವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ಈಶ್ವರಪ್ಪ ನವರು ಸಿಎಂ ಮತ್ತು ಡಿಸಿಎಂ ಅವರಲ್ಲಿ ಕೋರಿ ಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡು ಸಾಮಾನ್ಯ ಕಾರ್ಯಕರ್ತ ರಂತೆ ತಮ್ಮ ರಾಜಕೀಯ ಅನುಭವ ವನ್ನು ಧಾರೆ ಎರೆಯಲಿ.

ಈ ಹಿಂದೆ ಬಿಜೆಪಿಯಲ್ಲಿ ದ್ದಾಗಲೂ ಸಹ ಈಶ್ವರಪ್ಪ ನವರು ಡಿ.ಕೆ. ಶಿವಕುಮಾರ್ ವಿರುದ್ದ ಅರ್ಥಹೀನ ಹೇಳಿಕೆಗಳನ್ನು ನೀಡಿದ್ದರು. ಆಗ ಡಿಕೆಶಿ ಅವರು ಹೀಗೆ ಕೆಣಕುತ್ತಿದ್ದರೆ ಸೆಟ್ಲಮೆಂಟ್ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದರು. ಅದರ ಪರಿಣಾಮವೇನೋ ಎಂಬಂತೆ ಈಶ್ವರಪ್ಪ ನವರು ರಾಜಕೀಯ ಸ್ಥಾನಮಾನ ಎಲ್ಲಿಗೆ ತಲುಪಿದೆ ಎಂಬುವುದು ಜನಕ್ಕೆ ಗೊತ್ತಿದೆ ಎಂದು ಆರ್. ಮೋಹನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t