ಮನೆ ಶಿವಮೊಗ್ಗ “ಬುದ್ದಿ ವಂತರು ಬಡವರಾಗುವುದು ಏಕೆ ?” ಪತ್ರಕರ್ತ ನವೀನ್ ಕುಮಾ‌ರ್ ಚೊಚ್ಚಲ ಕೃತಿಗೆ ಕನ್ನಡ ಪುಸ್ತಕ...

“ಬುದ್ದಿ ವಂತರು ಬಡವರಾಗುವುದು ಏಕೆ ?” ಪತ್ರಕರ್ತ ನವೀನ್ ಕುಮಾ‌ರ್ ಚೊಚ್ಚಲ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಗೌರವ..!!

43
0

ಶಿಕಾರಿಪುರ : ಲೇಖಕ ಹಾಗೂ ಪತ್ರಕರ್ತ ನವೀನ್ ಕುಮಾರ್ ಎಂ. ರವರು ಬರೆದಿರುವ “ಬುದ್ದಿ ವಂತರು ಬಡವರಾಗುವುದು ಏಕೆ ?” ಎಂಬ ಕನ್ನಡದ ಪ್ರಯೋಗಾತ್ಮಕ ಕೃತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಡಿ ಯಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ (2025-26)ಕ್ಕೆ ಆಯ್ಕೆಯಾಗಿದೆ.

ಈ ಕೃತಿ ಲೇಖಕರ ಮೊದಲ ಪುಸ್ತಕವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ವಿರಳವಾದ ನ್ಯೂರೋ ಎಕನಾ ಮಿಕ್ಸ್ (Neuro Economics) ವಿಷಯ ವನ್ನು ಸರಳ ಭಾಷೆಯಲ್ಲಿ ಓದುಗರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಹಣ ಮತ್ತು ಮಾನವ ಮನಸ್ಸಿನ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಮೂಲಕ, ಆರ್ಥಿಕ ಅರಿವು ಮತ್ತು ಚಿಂತನೆಗೆ ಹೊಸ ಆಯಾಮ ನೀಡುವ ಪ್ರಯತ್ನ ಈ ಕೃತಿಯಾಗಿದೆ.

ಪುಸ್ತಕ ಇನ್ನೂ ಬಿಡುಗಡೆ ಯಾಗುವ ಮುನ್ನವೇ ದೊರೆತ ಈ ಮಾನ್ಯತೆ, ಕನ್ನಡದಲ್ಲಿ ಆಧುನಿಕ ವಿಷಯಗಳು ಹಾಗೂ ಹೊಸ ಚಿಂತನೆಗಳಿಗೆ ದೊರೆಯುತ್ತಿರುವ ಸ್ವೀಕಾರವನ್ನು ತೋರಿಸುತ್ತದೆ. ಯುವ ಬರಹ ಗಾರರನ್ನು ಪ್ರೋತ್ಸಾಹಿಸುವ ಕನ್ನಡ ಪುಸ್ತಕ ಪ್ರಾಧಿಕಾರದ ಈ ಯೋಜನೆ, ರಾಜ್ಯದ ಸಾಹಿತ್ಯ ವಲಯದಲ್ಲಿ ಮಹತ್ವ ಪಡೆದಿದೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ