ಶಿವಮೊಗ್ಗ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗದ ವಿದ್ಯಾನಗರದ ಮೇಲ್ವೇತುವೆಯ ತಿರುವಿನಲ್ಲಿ ಡಿ.28ರ ರವಿವಾರ ಸಂಭವಿಸಿದೆ.
ಚನ್ನಗಿರಿ ತಾಲೂಕಿನ ರಾಘವೇಂದ್ರ ಮೃತಪಟ್ಟವರು.ಲಾರಿ ಮತ್ತು ಬೈಕ್ ಮೇಲ್ಸೇತುವೆಯಿಂದ ಒಟ್ಟಿಗೆ ಕೆಳಗೆ ಬಂದಿವೆ. ವಿದ್ಯಾನಗರದ ಕಡೆಗೆ ತಿರುವು ಪಡೆಯುವಾಗ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಬೈಕ್ ಸವಾರ ಸಿಲುಕಿದ್ದಾನೆ. ಆತನ ಮೇಲೆ ಲಾರಿ ಚಕ್ರಗಳು ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೂರ್ವ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









