ಮನೆ ಶಿವಮೊಗ್ಗ ಭೂತಪ್ಪ ಮತ್ತು ಚೌಡಮ್ಮ ದೇವರ ಕಾರ್ತಿಕ ದೀಪೋತ್ಸವ ಸಂಪನ್ನ..!!

ಭೂತಪ್ಪ ಮತ್ತು ಚೌಡಮ್ಮ ದೇವರ ಕಾರ್ತಿಕ ದೀಪೋತ್ಸವ ಸಂಪನ್ನ..!!

44
0

ಅನಂದಪುರ:ಸಮೀಪದ ದಾಸಕೊಪ್ಪದ ಅಂಬೇಡ್ಕರ್ ವೃತ್ತದ ಬಳಿ ಇರುವ ಭೂತಪ್ಪ ಮತ್ತು ಚೌಡಮ್ಮ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಅದ್ದೂರಿಯಾಗಿ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿತು.

ನೂರಾರು ಭಕ್ತರು ಈ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡು ಪೂಜಾ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕರಿಸಿದರು.

ಸುತ್ತಲೂ ದೀಪಾಲಂಕಾರ:

ದೇವಸ್ಥಾನದ ಸುತ್ತಲೂ ಆಕರ್ಷಣೆಯವಾಗಿ ವಿದ್ಯುತ್ ದೀಪ ಅಲಂಕಾರವನ್ನು ಮಾಡಲಾಗಿತ್ತು ಇದು ಜನರ ಮನ ಸಸೆಳೆಯಿತು .

ದೇವರಿಗೆ ವಿಶೇಷ ಅಲಂಕಾರ ಮಾಡಿ ಕಾರ್ತಿಕ ದೀಪೋತ್ಸವದ ಪೂಜೆಯ ಧಾರ್ಮಿಕ ಕಾರ್ಯವನ್ನು ಉದಯ್ ದೇಶಪಾಂಡೆ ಭಟ್ಟರು ನೆರವೇರಿಸಿ ಕೊಟ್ಟರು ನಂತರ ಸಾರ್ವಜನಿಕವಾಗಿ ಅನ್ನಸಂತರ್ಪಣ ಕಾರ್ಯಕ್ರಮ ನೆರವೇರಿತು.

ಸಿಡಿಮದ್ದು ಪ್ರದರ್ಶನ:

ಪೂಜೆಯ ಸಮಯದಲ್ಲಿ ವಿಶೇಷವಾಗಿ ಸಿಡಿಮದ್ದು ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t