ವಿದ್ಯುತ್ ಸರ್ಕ್ಯೂಟ್‌ನಲ್ಲಿಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಶಕ್ತಿ ಪ್ರಮಾಣೀಕರಣದ ಆವಿಷ್ಕಾರಕ್ಕಾಗಿ” ವಿಜ್ಞಾನಿಗಳಾದ ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರು 2025ರ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಈ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ನೀಡುತ್ತದೆ. ನೊಬೆಲ್ ಗೆ ಆಯ್ಕೆಗೊಂಡ ಮೂವರು ವಿಜ್ಞಾನಿಗಳಿಗೂ ಒಟ್ಟು 1.2 ಮಿಲಿಯನ್ ಡಾಲರ್ ನಗದು ಬಹುಮಾನ ಹಂಚಿಕೆ ಮಾಡಲಾಗುತ್ತದೆ.

ನೊಬೆಲ್ ವಿಜೇತ ಮೂವರು ಭೌತ ವಿಜ್ಞಾನಿಗಳು ಅಮೆರಿಕ ಮೂಲದವರು ಎಂದು ವರದಿ ತಿಳಿಸಿದೆ. ಡೈನಾಮೈಟ್ ಆವಿಷ್ಕಾರ ಹಾಗೂ ಉದ್ಯಮದಿಂದ ಅಪಾರ ಸಂಪತ್ತು ಗಳಿಸಿದ್ದ ಆಡ್ ನೊಬೆಲ್ ಅವರ ಉಯಿಲಿನ (Will) ಆಧಾರದ ಮೇಲೆ ನೊಬೆಲ್ ಪ್ರಶಸ್ತಿ ಆಯ್ಕೆ ಆರಂಭವಾಗಿತ್ತು.

1901ರಿಂದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಾರ್ಷಿಕವಾಗಿ ವಿಜ್ಞಾನ, ಸಾಹಿತ್ಯ, ಶಾಂತಿ, ಇಕಾನಾಮಿಕ್ಸ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಸಾಧಕರಿಗೆ ಈ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿ, ನಗದು ಮತ್ತು ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.
ನಮ್ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









