ಸಾಗರ: ಜಾನುವಾರುಗಳಿಗೆ ಮೇವು ಮತ್ತು ಸೊಪ್ಪು ತರಲು ಕಾಡಿಗೆ ಹೋಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವನಪ್ಪಿದ್ದಾರೆ.
ಸಾಗರದ ಉಳ್ಳೂರಿನ ಸಮೀಪದ ಮಂಚಾಲೆ ಗ್ರಾಮದ ನಿವಾಸಿಯಾದ ಹೇಮಂತ್ (27) ತಂದೆ ರಾಜು ಈ ಘಟನೆಯಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತ ಹೇಮಂತ್ ಫೆಬ್ರವರಿ 14 ರ ಶನಿವಾರದಂದು ಎಂದಿನಂತೆ ಜಾನುವಾರುಗಳಿಗೆ ಮೇವು ಮತ್ತು ಸೊಪ್ಪು ತರಲು ಬಾಳೆಗುಂಡಿಯ ಕಾಡಿನಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದ ರೆಂಬೆ ಹೇಮಂತನ ಮರ್ಮಾಂಗಕ್ಕೆ ಹೊಡೆದು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಕೆಳಗೆ ಬಿದ್ದ ಹೇಮಂತನನ್ನು ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ನೋಡಿ ಅವರ ಮನೆಗೆ ತಿಳಿಸಿ ಸಾಗರದ ಭಾಗವತ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರವಾನೆ ಮಾಡಿದ್ದಾರೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯೆ ತೀರ್ಥಳ್ಳಿಯ ಬಳಿ ಹೇಮಂತನ ಆರೋಗ್ಯ ಕೆಟ್ಟು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ತೋರಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









