ಮನೆ ಶಿವಮೊಗ್ಗ ಮರ್ಯಾದಾಗೇಡು ಹತ್ಯೆ ತಡೆಗೆ ಕಠಿಣ ಕಾಯ್ದೆ ಜಾರಿಯಾಗಲಿ ಎಂದು ಸಿಎಂಗೆ ಸಮಾನ ಮನಸ್ಕರ ಬಳಗ ಆಗ್ರಹ..!!

ಮರ್ಯಾದಾಗೇಡು ಹತ್ಯೆ ತಡೆಗೆ ಕಠಿಣ ಕಾಯ್ದೆ ಜಾರಿಯಾಗಲಿ ಎಂದು ಸಿಎಂಗೆ ಸಮಾನ ಮನಸ್ಕರ ಬಳಗ ಆಗ್ರಹ..!!

81
0

ಶಿವಮೊಗ್ಗ : ಸಾಮಾಜಿಕ ಪಿಡುಗಾಗಿರುವ ಮರ್ಯಾದೆ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ಕಾನೂನಿನ ಅಗತ್ಯವಿದೆ ಎಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.

ಇಂದು ಈ ಕುರಿತು ವೇದಿಕೆಯ ಪ್ರಮುಖರು ಪತ್ರಕರ್ತರಾದ ಎನ್. ರವಿಕುಮಾರ್ (ಟೆಲೆಕ್ಸ್ ) ಮತ್ತು ದೇಶಾದ್ರಿ ಹೊಸ್ಮನಿ, ಪತ್ರಿಕಾಗೋಷಿಯಲ್ಲಿ ಮಾತನಾಡಿ, ಈ ಬಗ್ಗೆ ಹೊಸ ಕಾಯ್ದೆಯನ್ನು ರೂಪಿಸಲು ಡಿ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಅಂತರಜಾತಿ ವಿವಾಹವಾದ ಮಕ್ಕಳನ್ನು, ಪರಸ್ಪರ ಪ್ರೀತಿಸಿದವನ್ನು ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಿನಲ್ಲಿ ನಿರ್ಧಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಜಾತಿ ವಾದಿಗಳು ಇಂತಹಕ್ರೌರ್ಯವನ್ನು ಸಾಮಾಜಿಕ ಘನತೆ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವಿದೆ. ಇದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ಉಗ್ರಶಿಕ್ಷೆಯ ಕಾಯ್ದೆ ಅಗತ್ಯವಾಗಿದೆ ಎಂದರು.

ಹುಬ್ಬಳ್ಳಿಯ ವೀರಾಪುರದಲ್ಲಿ ಇನಾಂ ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿ ತುಂಬು ಗರ್ಭಿಣಿಯಾಗಿದ್ದ ಸ್ವಂತ ಮಗಳನ್ನೆ ತಂದೆಯೊಬ್ಬ ಜಾತಿ ದ್ವೇಷದಿಂದ ಕೊಂದು ಹಾಕಿರುವುದು, ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮ ಸಮಾಜದ ಕ್ರಾಂತಿಪುರುಷ ಬಸವಣ್ಣನವರ ಈ ನಾಡಿಗೆ ದೊಡ್ಡ ಕಳಂಕವಾಗಿದೆ ಎಂದರು.

ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಜಾತಿ ದ್ವೇಷ ವಿಜೃಂಭಿಸಿದೆ. ಜಾತಿಯ ವಿಷದ ಕ್ರೂರತೆಯನ್ನು ಇದು ಪ್ರತಿಬಿಂಬಿಸುತ್ತದೆ. ಮಗಳುಮಾಡಿದ ತಪ್ಪಿಗೆ ತಂದೆಯೇ ಮಗಳನ್ನು ಕೊಲೆ ಮಾಡುವಂತಹ ಸಾಮಾಜಿಕ ಕಾರಣಕ್ಕಾಗಿಯೇ ಹುಟ್ಟಿಕೊಂಡಿದೆ. ನನ್ನ ಮಗಳು ದಲಿತ ಹುಡುಗ ನೊಬ್ಬನನ್ನು ಮದುವೆಯಾದರೆ ನನಗೆ ಸಮಾಜದಲ್ಲಿ ಬೆಲೆ ಇಲ್ಲ ಎಂಬ ಕಾರಣಕ್ಕೆ ಆತ ಈ ಕ್ರೌರ್ಯ ಎಸಗಿಸಿದ್ದಾನೆ. ಇಂತಹ ಜಾತಿಯೇ ಕ್ರೌರ್ಯಗಳು ರಾಜ್ಯಾದ್ಯಂತ ಪದೇ ಪದೇ ನಡೆಯುತ್ತಲೆ ಇದೆ ಎಂದರು.

ಮರ್ಯಾದ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ಬಲಿಯಾದ ಮಾನ್ಯಾಳ ಹೆಸರಲ್ಲಿ ಉಗ್ರಶಿಕ್ಷೆಯ ಕಾಯ್ದೆಯನ್ನು ರೂಪಿಸಬೇಕಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಆಂದೋಲನವನ್ನೇ ಆರಂಭಿಸಿದ್ದೇವೆ. ನಮ್ಮ ಈ ಆಂದೋಲನಕ್ಕೆ ನೂರಾರು ಸಮಾನ ಮನಸ್ಕರು ಕೈಜೋಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಒಪ್ಪಿಗೆಯನ್ನು ಸೂಚಿಸಿ, ಸಹಿಕೂಡ ಹಾಕಿದ್ದಾರೆ. ಇದೆಲ್ಲವನ್ನು ಸಂಗ್ರಹಿಸಿ ಇಂತಹ ಘೋರ ಅಪರಾಧಕ್ಕೆ ಕಠಿಣಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಈ ಉಗ್ರ ಶಿಕ್ಷೆಯ ಕಾಯ್ದೆಗೆ ಮಾನ್ಯಾ ಕಾಯ್ದೆ ಎಂದು ಹೆಸರಿಡುವ ಮೂಲಕ ಇದುವರೆಗೂ ಈರಾಜ್ಯದಲ್ಲಿ ಮರ್ಯಾದ ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿ ಸುವಂತಾಗಲಿ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ದಿಟ್ಟಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ