ಮನೆ ಶಿವಮೊಗ್ಗ ಮಳೆ ಅಬ್ಬರಕ್ಕೆ ಕುಸಿದು ಬಿದ್ದ ಕೊಟ್ಟಿಗೆ ಮನೆ

ಮಳೆ ಅಬ್ಬರಕ್ಕೆ ಕುಸಿದು ಬಿದ್ದ ಕೊಟ್ಟಿಗೆ ಮನೆ

188
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಆನಂದಪುರ:

ಆನಂದಪುರ ಸಮೀಪದ ಮುರುಘಮಠದ ಶೇಖರ್ ಪೂಜಾರಿ ರವರ ಕೊಟ್ಟಿಗೆ ಮನೆ ಮಳೆಯ ಅಬ್ಬರಕ್ಕೆ ಕುಸಿದು ಬಿದ್ದ ಘಟನೆ ನಡೆದಿದೆ.

ಗುರುವಾರ ತಡರಾತ್ರಿಯಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಕೊಟ್ಟಿಗೆ ಮನೆಯ ಮೇಲ್ಚಾವಣಿ ಪೂರ್ಣ ಕುಸಿದು ಬಿದ್ದು ಒಳಗೆ ಇದ್ದ 12 ದನ ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಮಳೆಯಿಂದ ದನದ ಕೊಟ್ಟಿಗೆ ಸಂಪೂರ್ಣ ಕುಸಿದು ಬಿದ್ದಿದ್ದು ಲಕ್ಷಾಂತರ ರೂಪಾಯಿ ಯಷ್ಟು ನಷ್ಟವಾಗಿದೆ. ಇದರ ಸಂಬಂಧ ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಗಮನ ರಚಿಸುತ್ತ ಪರಿಹಾರ ನೀಡಬೇಕು ಎಂದು ಶೇಖರ್ ಪೂಜಾರಿ ಮನವಿ ಮಾಡಿದರು.

ಈ ಸಂಬಂಧ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಭೇಟಿ ನೀಡಿ ಮಾತನಾಡಿ ದನದ ಕೊಟ್ಟಿಗೆಯನ್ನು ಉದ್ಯೋಗ ಖಾತರಿ ಯೋಜನೆ ಯಡಿ ನಿರ್ಮಿಸಿಕೊಡಲಾಗುವುದು ಎಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ರೀತಿಯ ಹಾನಿಯಾದರೂ ತಕ್ಷಣ ನಮ್ಮಗೆ ತಿಳಿಸಿ ಎಂದು ಮನವಿ ಮಾಡಿದರು.