
ಆನಂದಪುರ:
ಮಹರ್ಷಿ ವಾಲ್ಮೀಕಿಯು ರಾಮಾಯಣ ಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ ದಾರ್ಶನಿಕರು ಎಂದು ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರವಿಶಂಕರ್ ಅಭಿಪ್ರಾಯ ಪಟ್ಟರು.
ಇವರು ಇಂದು ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಸಾಧಿಸುವ ಮನಸ್ಸಿದ್ದಲ್ಲಿ, ನಾವು ಏನನ್ನಾದರೂ ಸಾಧಿಸಬಹುದು, ಸಾಮಾನ್ಯ ವ್ಯಕ್ತಿಯೊಬ್ಬ ಮಹಾಕಾವ್ಯ ರಚಿಸುವಷ್ಟರ ಮಟ್ಟಿಗೆ ಜ್ಞಾನ ಸಂಪಾದನೆ ಮಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿಯನ್ನು ತೋರಿಸಿಕೊಟ್ಟಿರುವುದು ನಾವೆಲ್ಲರೂ ಮೆಚ್ಚಲೇ ಬೇಕಾದ ಸಂಗತಿ ಆಗಿದೆ.

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಾಣ ಗ್ರಂಥದ ನೈತಿಕ ಮೌಲ್ಯಗಳು, ಪ್ರತಿ ವ್ಯಕ್ತಿಯ ಜೀವನದ ನಡೆಯುವ ಹಲವು ಘಟನೆಗಳಿಗೆ ಆದರ್ಶಪ್ರಾಯವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಮಹರ್ಷಿ ವಾಲ್ಮೀಕಿ ಅವರ ವಿಚಾರಧಾರೆಗಳು, ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರದ ರಾಮಚಂದ್ರ, ಡಾ.ಗುರುಚರಣ್,ಮಮತಾ,ಸರ್ವೇಶ್, ಗಜಾನನ ಪಂಡಿತ್, ಹಾಗೂ ಶಶಿ ,ಮಧುಚಂದ್ರ ಉಪಸ್ಥಿತರಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








