ಮನೆ Blog ಮುಂಬಾಳಿನ ತಿರುವಿನಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ..!!

ಮುಂಬಾಳಿನ ತಿರುವಿನಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ..!!

30
0

ಆನಂದಪುರ ಸಮೀಪದ ಮುಂಬಾಳಿನ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕ ವ್ಯಾಪಕವಾಗಿ ಕಾಡು ಜಾತಿಯ ಗಿಡಗಂಟಿಗಳು ಬೆಳದಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಎಸ್.ವೈ.ಎಸ್ ಹಿಸಭಾ ಸಾಂತ್ವನ ಪ್ರದಾನ ಕಾರ್ಯದರ್ಶಿ ಉಸ್ಮಾನ್ ತಿಳಿಸಿದರು.

ಇವರು ಇಂದು ಪತ್ರಕರ್ತರೊಂದಿಗೆ ಮಾತನಾಡಿ ಆನಂದಪುರದಿಂದ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಮುಂಬಾಳಿನ ತಿರುವಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ.

ಇದಕ್ಕೆಲ್ಲಾ ಮೂಲ ಕಾರಣ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕ ಹೇರಳವಾಗಿ ಬೆಳೆದಿರುವ ಕಾಡು ಜಾತಿಯ ಗಿಡಗಂಟಿಗಳು ಮತ್ತು ಪ್ರಮುಖವಾಗಿ ಆ ತಿರುವಿನಲ್ಲಿ ಯಾವುದೇ ರೀತಿಯಲ್ಲಿಯೂ ಯಾವುದೇ ನಾಮಫಲಕಗಳನ್ನೂ ಅಳವಡಿಸಲ್ಲಿಲ್ಲದಿರುವುದು ಎಂದು ವಿರೋಧಿಸಿದರು.

ಆದಷ್ಟು ಬೇಗನೆ ಸಂಭದ ಪಟ್ಟ ಅಧಿಕಾರಿಗಳು ಮುಂಬಾಳಿನ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಬೆಳಿದಂತಹ ಗಿಡಗಂಟಿಗಳನ್ನು ತೆರವು ಗೊಳಿಸಿ ನಾಮಫಲಕ ಅಳವಡಿಸಿ ಅಪಘಾತ ವಾಗುವುದನ್ನು ನಿಲ್ಲಿಸಿ ಎಂದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t