ಆನಂದಪುರ:
ರಕ್ತದಾನ ಮಾಡಿ ಒಂದು ಜೀವವನ್ನು ಉಳಿಸುವುದು ಪುಣ್ಯದ ಕೆಲಸವಾಗಿದೆ ಎಂದು ಗರ್ತಿಕೆರೆಯ ನಿಟ್ಟೂರು ಮಠದ ರೇಣುಕಾನಂದ ಸ್ವಾಮಿ ತಿಳಿಸಿದರು.
ಇವರು ಇಂದು ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 171 ನಾರಾಯಣ ಗುರುಗಳ ಜಯಂತೋತ್ಸವದ ಅಂಗವಾಗಿ ಏರ್ಪಡಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನಾರಾಯಣಗುರು ಜಯಂತೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಮಾಡಿ ಅನೇಕ ಜೀವವನ್ನು ಉಳಿಸುವ ಕೆಲಸದಲ್ಲಿ ತೊಡಗಿರುವುದು ಬಹಳ ಸಂತಸವಾಗುತ್ತದೆ.
ರಕ್ತದಾನ ಮಾಡಿದಷ್ಟು ಆರೋಗ್ಯವು ಸುಖಕರವಾಗಿರುತ್ತದೆ ಮತ್ತು ನಾವು ಮಾಡಿದ ರಕ್ತದಾನದಿಂದ ಇತರರ ಜೀವನದಲ್ಲಿ ಅದು ಬೆಳಕಾಗಿರುತ್ತದೆ ಎಂದು ತಿಳಿಸಿದರು.

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪನವರು ಮಾತನಾಡಿ ಬಡ ಮಕ್ಕಳಿಗೆ ಓದಿಸುವ ಮತ್ತು ಸಾರ್ವಜನಿಕರಿಗೆ ವಳಿತಾಗುವ ಕೆಲಸ ಕಾರ್ಯಗಳನ್ನು ಮಾಡಿದರೆ ದೇವರು ಮೆಚ್ಚುತ್ತಾನೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾರ್ವಜನಿಕರಿಗೆ ಒಳಿತಾಗುವ ಕಾರ್ಯಗಳನ್ನು ಮಾಡಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕೆ ಎಸ್ ಪ್ರಶಾಂತ್ ಸಾಗರ್ , ಅಧ್ಯಕ್ಷರಾದ ಬಂಗಾರಪ್ಪ, ಹಾಗೂ ಪ್ರಮುಖರಾದ ಶರತ್ ನಾಗಪ್ಪ, ದೇವರಾಜ್, ರಮಾನಂದ ಸಾಗರ್, ಯೋಗೇಂದ್ರಪ್ಪ , ವೈದ್ಯಾಧಿಕಾರಿ ಕಾಂತೇಶ್ , ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ವಿಶೇಷವಾಗಿ ಈ ರಕ್ತದಾನ ಶಿಬಿರದಲ್ಲಿ ಒಟ್ಟು 60 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









