ಮನೆ ಶಿವಮೊಗ್ಗ ರಕ್ತ ದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗೋಣ: ಪಿ.ಎಸ್.ಐ. ಪ್ರವೀಣ್..!!

ರಕ್ತ ದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗೋಣ: ಪಿ.ಎಸ್.ಐ. ಪ್ರವೀಣ್..!!

88
0

ಆನಂದಪುರ:ಇನ್ನೊಬ್ಬರ ಜೀವ ರಕ್ಷಣೆಯ ಜೊತೆಗೆ ನಮ್ಮ ಆರೋಗ್ಯ ರಕ್ಷಿಸಲು ಸಹಕರಿಸುವ ಏಕೈಕ ಅತ್ಯುತ್ತಮ ದಾನ ರಕ್ತದಾನ ಆಗಿದೆ ಎಂದು ಆನಂದಪುರ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದರು.

ಇವರು ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆಗಳೊಂದಿಗೆ ನೇರ ಸಂಪರ್ಕ ಹೊಂದಿರುವ ನಮ್ಮ ಪೊಲೀಸರಿಗೆ ಇಂದು ರಕ್ತದ ಅವಶ್ಯಕತೆ ಎಷ್ಟರಮಟ್ಟಿಗೆ ಇದೆ ಎಂದು ಸ್ಪಷ್ಟವಾಗಿ ತಿಳಿದಿರುತ್ತದೆ.

ಪ್ರಮುಖವಾಗಿ ಪ್ರಪಂಚದಲ್ಲಿ ಉತ್ಪಾದಿಸಲು ಆಗದೇ ಇರುವಂತಹುದು ರಕ್ತ ಮಾತ್ರ. ಅನೇಕರು ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ ಆದರೆ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವೂ ಚುರುಕುಗೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗುತ್ತದೆ ಎಂದರು.

ಪಿ.ಎಸ್.ಐ ಪ್ರವೀಣ್ ಹಾಗೂ ಎ.ಎಸ್.ಐ ದೇವಿದಾಸ್ ರಕ್ತದಾನ ಮಾಡುತ್ತಿರುವುದು.

ರಕ್ತವನ್ನು ದಾನ ಮಾಡಿದರೆ ಪರೋಕ್ಷವಾಗಿ ಹಲವಾರು ಜೀವಗಳನ್ನು ಉಳಿಸಿದಂತಾಗುತ್ತದೆ. ಯಾವುದೇ ವ್ಯಕ್ತಿಯು ಪ್ರತಿಫಲಾಪೇಕ್ಷೆಯಿಲ್ಲದೇ ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡುವುದು ಉಪಕಾರದ ಕಾರ್ಯವಾಗಿದೆ ಈ ಕಾರ್ಯದಲ್ಲಿ ಯುವ ಸಮುದಾಯಗಳು ತೊಡಗಿರಿ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಆನಂದಪುರ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದಾರೂಡ, ದೇವಿದಾಸ್, ವೆಂಕಟೇಶ್ ಮತ್ತು ಹಾಲೇಶಪ್ಪ ಎಸ್ ಹಾಗೂ ಸಿಬ್ಬಂದಿಗಳು ಮತ್ತು ಆರೋಗ್ಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ರಕ್ತದಾನ ಮಾಡಿದವರಿಗೆ ಪ್ರಸಂಶನ ಪತ್ರ ನೀಡುತ್ತಿರುವುದು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t