ಮನೆ Blog ರತ್ನಾಕರ ಹೊನಗೋಡು ಕೀಳುಮಟ್ಟದ ತರ್ಡ್ ಕ್ಲಾಸ್ ರಾಜಕಾರಣ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ..!!

ರತ್ನಾಕರ ಹೊನಗೋಡು ಕೀಳುಮಟ್ಟದ ತರ್ಡ್ ಕ್ಲಾಸ್ ರಾಜಕಾರಣ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ..!!

100
0

ಆನಂದಪುರ: ರತ್ನಾಕರ ಹೊನಗೋಡು ಕೀಳುಮಟ್ಟದ ತರ್ಡ್ ಕ್ಲಾಸ್ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ವಾಗ್ದಾಳಿ ನಡೆಸಿದರು.

ಇವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ಆರಂಭಗೊಳ್ಳಲಿದೆ. ಇದಕ್ಕಾಗಿ ಶಾಸಕರು ತುರ್ತಾಗಿ ಜಾತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಎಲ್ಲಾ ಇಲಾಖೆಯವರನ್ನು ಕರೆದು ಸಭೆ ಮಾಡುವ ಜವಾಬ್ದಾರಿ ಇರುತ್ತದೆ. ಇದಕ್ಕೆ ಧಿಕ್ಕಾರ ಎಂದು ಹೇಳಿದ ರತ್ನಾಕರ ಹೊನಗೋಡಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವೇ ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾಗಿರಲಿ, ಎಂಎಲ್‌ಎ ಅಥವಾ ಎಂಪಿ ಆಗಿರಲಿ, ಅಧಿಕಾರದ ಅವಧಿ ಕೇವಲ ಐದು ವರ್ಷ ಮಾತ್ರ. ಮಾಜಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ರತ್ನಾಕರ ಹೊನಗೋಡಿಗೆ ತಾನು ಮಾಜಿ ಎಂಬ ಅರಿವು ಇಲ್ಲ. ಹಾಲಿ ಸದಸ್ಯನಂತೆ ಮುಂದೆ ಹೋಗಿ ನಾನೇ ಸ್ವಯಂ ಘೋಷಿತ ನಾಯಕ ಎಂದು ಮಾಧ್ಯಮದ ಮುಂದೆ ತೋರಿಸಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.

ರತ್ನಾಕರ ಹೊನಗೋಡಿಗೆ ದುರಾಡಳಿತ ಮತ್ತು ಭ್ರಷ್ಟಾಚಾರ ಇರುವಕ್ಕಿಯ ವಿಶ್ವವಿದ್ಯಾಲಯದ ಒಂದೊಂದು ಬೇಲಿ ಕಂಬ ಹಾಗೂ ಮರದ ಮುಂಡು ಹೇಳುತ್ತವೆ. ತಾಲೂಕಿನ ಜನರು ಗೆಲ್ಲಿಸಿ ಕಳಿಸಿದ ನಂತರ ಅರಣ್ಯ ಇಲಾಖೆಯವರಿಗೆ ಹೊಡೆದು, ನಾಟ ಕದ್ದು ಜೈಲಿಗೆ ಹೋದ ವ್ಯಕ್ತಿಗೆ ನಮ್ಮ ಶಾಸಕರ ಬಗ್ಗೆ ಮಾತನಾಡಲು ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದರು.

ಸಾಗರ ಮಾರಿಕಾಂಬ ದೇವಸ್ಥಾನದ ಗೌರವ ಅಧ್ಯಕ್ಷರಾದ ಶಾಸಕರು ಜಾತ್ರಾ ಸಮಿತಿ ವಿಚಾರ ಕೋರ್ಟ್‌ನಲ್ಲಿ ಇದ್ದ ಸಮಯದಲ್ಲೂ ಎಲ್ಲಾ ಪಕ್ಷದವರು ಹಾಗೂ ಎಲ್ಲಾ ಜಾತಿ ಜನಾಂಗದವರನ್ನು ಸೇರಿಸಿಕೊಂಡು ಅದ್ದೂರಿಯಾಗಿ ಜಾತ್ರೆ ನಡೆಸಿದ್ದರು. ಇದಕ್ಕೆ ಹಾಲಪ್ಪನವರ ಪ್ರಶಂಸೆಯೂ ಇದೆ. ಆದರೆ ಮುಟ್ಟಾಳ ರತ್ನಾಕರ ಹೊನಗೋಡಿಗೆ ಅದು ಅರ್ಥವಾಗುತ್ತಿಲ್ಲ ಎಂದು ವಿರೋಧಿಸಿದರು.

ಸಾಗರ ಜಾತ್ರೆಗೆ ಫ್ಲೆಕ್ಸ್ ಹಾಕಿದ್ದೇವೆ. ನೀನು ಕಮಿಟಿಯಲ್ಲಿ ಇದ್ದೀಯಾ? ನಾವು ಯಾರಾದರೂ ಇದಕ್ಕೆ ಪ್ರಶ್ನೆ ಮಾಡಿದ್ದೇವಾ? ಆದರೆ ನಮ್ಮ ಶಾಸಕರ ಅಭಿಮಾನಿಗಳು ಫ್ಲೆಕ್ಸ್ ಹಾಕಿದ್ದಕ್ಕೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಮ್ಮ ಶಾಸಕರಿಗೆ ಪ್ರಚಾರದ ಹಂಗಿಲ್ಲ. ತಾಲೂಕಿನ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವು ಇದೆ. ಶಾಸಕರು ಅರಣ್ಯ ಇಲಾಖೆ ಬಗ್ಗೆ ಮಾತನಾಡಿಲ್ಲ ಎಂದು ಹೇಳುವಿರಲ್ಲ, ನೀವು ಕೆಡಿಪಿ ರಾಜ್ಯ ಸದಸ್ಯನಾಗಿದ್ದಾಗ ಆನಂದಪುರಕ್ಕೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ತಮ್ಮ ಇರುವಿಕೆ ತೋರಿಸಿಕೊಳ್ಳುವುದಕ್ಕಾಗಿ ಪತ್ರಿಕಾಗೋಷ್ಠಿ ಮಾಡಿ ರಾಜಕಾರಣ ಮಾಡುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ಆಲಿಸಿ ರಾಜಕಾರಣ ಮಾಡಬೇಕು. ಮಾಧ್ಯಮದ ಮುಂದೆ ಹೋಗಿ ಶಾಸಕರಿಗೆ ಬೈದು ತಕ್ಷಣ ದೊಡ್ಡ ಮುಖಂಡ ಆಗುತ್ತೇನೆ ಎಂಬ ಭ್ರಮೆಯಲ್ಲಿ ರತ್ನಾಕರ ಹೊನಗೋಡು ಇದ್ದಾರೆ ಎಂದು ಹೇಳಿದರು.

ಮುಖಂಡರಾದ ಚೇತನ್ ಕಣ್ಣೂರು ಮಾತನಾಡಿ, ರತ್ನಾಕರ ಹೊನಗೋಡು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು ಗೋಪಾಲಕೃಷ್ಣ ಬೇಳೂರು ಅವರ ಭಿಕ್ಷೆಯಿಂದ ಎಂಬುದು ನೆನಪಿರಲಿ ಎಂದು ಹೇಳಿದರು.

ರತ್ನಾಕರ ಹೊನಗೋಡಿಗೆ ಬಿಜೆಪಿಯಲ್ಲಿ ತಾನು ಯಾರು ಎಂದು ಯಾರು ಕೇಳುತ್ತಿಲ್ಲ. ಇದರಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಾಧ್ಯಮದ ಮುಂದೆ ಬರುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಮಾನಂದ ಸಾಗರ್, ಕಲೀಮುಲ್ಲಾ, ಉಮೇಶ್ ಎನ್., ಬಾಬುಲ್ ಸಾಬ್ರು, ರಮತುಲ್ಲಾ, ಗಜೇಂದ್ರ, ಲಿಂಗರಾಜ್, ಅಮೀರ್, ಅರುಣ್ ಗೌಡ್ರು, ವಿಜಯ್ ಗೌಡ್ರು, ಬಸವರಾಜ್, ಎಂಎಲ್‌ಎಶ್ವರ, ಸಿರಿಜಾನ್, ಮೋಹನ್, ಆಸಿಫ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

✒️… ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t