
ಆನಂದಪುರ:ನಾನೇನು ಕಣ್ಣು ಮುಚ್ಚಿ ಕೂತಿಲ್ಲ ರೈತರ ಸಮಸ್ಯೆ ನನಗೂ ಅರ್ಥವಾಗುತ್ತೆ 10MVA ಶಕ್ತಿ ಪರಿವರ್ತಕ ವಿಫಲಗೊಂಡ ತಕ್ಷಣ ಕ್ರಮ ಕೈಗೊಂಡು ಹೊಸದೊಂದು ತರಿಸಿ ಕೆಲಸ ಮಾಡಿಸುತ್ತಿದ್ದೇನೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಇಂದು ಆನಂದಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಆನಂದಪುರ ಹೋಬಳಿಗೆ ವಿದ್ಯುತ್ ಪೂರೈಸಲೂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪೂರಕವಾಗಿದ್ದ 10 MVA ಶಕ್ತಿ ಪರಿವರ್ತಕ ವಿಫಲಗೊಂಡಿತ್ತು ಇದನ್ನು ತಕ್ಷಣ ಮಂತ್ರಿಗಳ ಬಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗನೆ 10 MVA ಶಕ್ತಿ ಪರಿವರ್ತಕ ತರಿಸಲಾಗಿದೆ.

ಇದನ್ನು ಸರಿಯಾಗಿ ಜೋಡಣೆ ಮಾಡಿ ಸಿದ್ಧಗೊಳಿಸಬೇಕೆಂದರೆ ಒಂದು ವಾರ ಸಮಯ ಹಿಡಿಯುತ್ತದೆ ಅಧಿಕಾರಿಗಳು ಸಹ ಹಗಲು ರಾತ್ರೆ ಸಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಒಂದು ಟಿಸಿ ಹೋದರೆ ಅದನ್ನು ಸರಿಪಡಿಸಲು 24 ಗಂಟೆ ಸಮಯ ಹಿಡಿಯುತ್ತದೆ ಇನ್ನು ಈ ಹೋಬಳಿಗೆ ವಿದ್ಯುತ್ ಪೂರೈಸುವ ಶಕ್ತಿ ಪರಿವರ್ತಕ ಹೋದರೆ ಎಷ್ಟು ಸಮಯ ಸರಿಪಡಿಸಲು ಹಿಡಿಯಬಹುದು ನೀವೇ ಯೋಚಿಸಿ ಎಂದರು.
ಇಂದು ರೈತ ಸಂಘದವರು ಹೋರಾಟ ಮಾಡುತ್ತಿದ್ದಾರಂತೆ ನಮಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಇರಬೇಕು ಆದರೆ ನಾನೆಂದು ಸುಮ್ಮನೆ ಕೂತಿಲ್ಲ ಕೂರುವ ಮನುಷ್ಯನು ನಾನಲ್ಲ 10 MVA ಶಕ್ತಿ ಪರಿವರ್ತಕ ಹೋದ ಬಳಿಕ ನಾನು ಮಂತ್ರಿ ಜಾರ್ಜ್ ಅವರ ಬಳಿಯೂ ಮಾತನಾಡಿ ಬೇಗನೆ ತರಿಸಿಸಲು ಪ್ರಯತ್ನಿಸಿದ್ದೇನೆ ಎಂದರು.

ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ನೀಡುತ್ತಿದ್ದೇವೆ ಮಂಗಳವಾರ ರಾತ್ರಿ ಒಳಗೆ ಸರಿ ಹೋಗಬಹುದು ಎಂದು ಅಂದಾಜಿಸಿದ್ದೇವೆ, ಇದರಿಂದ ರೈತರು ಸ್ವಲ್ಪ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ








