ಮನೆ Blog ವಕೀಲನ ದರ್ಪಕ್ಕೆ ದಲಿತರಿಗೆ ರಕ್ಷಣೆ ಇಲ್ಲ..!!

ವಕೀಲನ ದರ್ಪಕ್ಕೆ ದಲಿತರಿಗೆ ರಕ್ಷಣೆ ಇಲ್ಲ..!!

58
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.41064814, 0.50033325);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಆನಂದಪುರ ಪೊಲೀಸ್ ಠಾಣೆಯಲ್ಲಿ ದಲಿತರ ಪ್ರಕರಣ ದಾಖಲು ಮಾಡದೆ ಶರತ್ ಎಂಬ ವಕೀಲನ ದರ್ಪಕ್ಕೆ ದಲಿತರು ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಜೆ ಸಾಗರ್ ಬಣದ ಸಂಚಾಲಕ ನಟರಾಜ್ ಗೇರ್ ಬೀಸ್ ತಿಳಿಸಿದ್ದಾರೆ.

ಇವರು ಇಂದು ಪತ್ರಕರ್ತರೊಂದಿಗೆ ಮಾತನಾಡಿ ಜ.16 (ಬೆಳಗ್ಗಿನ ಜಾವ ) ರಾತ್ರೆ 1 ಗಂಟೆಗೆ ಹಾಲು ಗುಡ್ಡೆಯ ಬಾಳೂರಿನ ಗೋಮೈಯ್ದ ಎಂಬುವರ ಜಮೀನಿನಲ್ಲಿ ಕೇಳಿಕೊಂಡು ದರ್ಶನ್ ಟಿಪ್ಪರ್ ನಲ್ಲಿ ಮರಳು ತುಂಬುತ್ತಿದ್ದನು ಅದೇ ಸಮಯಕ್ಕೆ ವಕೀಲ ಶರತ್ ಅವರು ಮರಳು ತುಂಬ ಬೇಡಿ ತುಂಬಿರುವ ಮರಳನ್ನು ನಮ್ಮ ಮನೆಗೆ ಹೊಡೆಯಿರಿ ಎಂದು ಹೇಳಿದ್ದಾರೆ ಇದು ಆಗುವುದಿಲ್ಲ ಎಂದು ದರ್ಶನ್ ಮತ್ತು ಶರತ್ ನಡುವೆ ಮಾತಿನ ಚಕಾಮಕಿ ನಡೆದಿದೆ.

ನಂತರ ವಕೀಲ ಶರತ್ 112 ಗೆ ಕರೆ ಮಾಡಿ ದರ್ಶನ್ ಟಿಪ್ಪರನ್ನು ಹಿಡಿಸಿ ಕೊಟ್ಟು ಹೋಗಿದ್ದಾರೆ. ಬಳಿಕ ದರ್ಶನ್ ಮನೆಯ ಬಳಿ ಬಂದು ಇನ್ನೊಂದು ಗಾಡಿ ಇರುವುದನ್ನು ನೋಡಿ ವಕೀಲ ಶರತ್ ವಿಡಿಯೋ ಮತ್ತು ಫೋಟೋವನ್ನು ತೆಗೆದುಕೊಳ್ಳುತ್ತಿದ್ದರಿಂದ ಮತ್ತೆ ಇಬ್ಬರ ನಡುವೆ ಮಾತಿನ ಚಕಾಮಕಿ ನಡೆದು ಸುಮ್ಮನಾಗಿ ಹೋಗಿದ್ದಾರೆ.

ವಕೀಲ ಶರತ್ ನಂತರ ಕೊರಲಿಕೊಪ್ಪದ ಈಶ್ವರ ದೇವಸ್ಥಾನದ ಬಳಿ ದರ್ಶನ್ ಅವರ ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿ ,ಹೊಡೆದು ಕೊಂಡು ರಾಜಿ ಕೂಡ ಮಾಡಿಕೊಂಡು ಹೋಗಿದ್ದಾರೆ ಇದರ ವಿಡಿಯೋ ಸಮೇತ ನಮ್ಮಲಿದೆ ಎಂದರು.

ವಕೀಲ ಶರತ್ ಬಳಿಕ ಸಾಗರದ ಆಸ್ಪತ್ರೆ ಹೋಗಿ ದಾಖಲಾಗಿದ್ದಾರೆ ಹಾಗೂ ದರ್ಶನ್ ಹಾಗೂ ಅವರ ಸ್ನೇಹಿತರು ಆನಂದಪುರ ಆಸ್ಪತ್ರೆಗೆ ದಾಖಲಾಗಿದ ಬಳಿಕ ಪೊಲೀಸ್ ರಾತ್ರೆ ನೇ ಬಂದು ಬೆಳಗ್ಗೆ ನಿಮ್ಮ ಹೇಳಿಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಕಳಿಸಿದ್ದಾರೆ.

ಸಾಗರ ಆಸ್ಪತ್ರೆಯಲ್ಲಿ ದಾಖಲಾದ ವಕೀಲ ಶರತ್ ನ ಹೇಳಿಕೆ ತೆಗೆದು ಕೊಂಡು ಬೆಳಗ್ಗೆ ಸಂತೋಷ್ ಹಾಗೂ ಅವರ ಮೂರು ಜನ ಸ್ನೇಹಿತರನ್ನು ಬಂಧಿಸಿದ್ದಾರೆ ಅದೇ ಸಮಯದಲ್ಲಿ ಶಿವರಾಂ ಜಾತಿನಿಂದಾನೆ ಹಾಗೂ ಗಲಾಟೆ ಕುರಿತು ಪ್ರಕರಣ ದಾಖಲಿಸಲು ಮುಂದಾದರೆ ಇದರ ಕುರಿತು ಪ್ರಕರಣ ದಾಖಲಿಸಲಿಲ್ಲ ಇದರ ವಿರುದ್ಧ ಕೇಳಿದರೆ ತನಿಖಾ ಹಂತದಲ್ಲಿದೆ ಎಂದು ಹಿಂಬರಹವನ್ನು ನೀಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಮನವಿ ಮಾಡುವುದೇನೆಂದರೆ, ಈ ಪ್ರಕರಣದಲ್ಲಿ ವಕೀಲನ ದರ್ಪಕ್ಕೆ ದಲಿತರಿಗೆ ಅನ್ಯಾಯ ಆಗಿದೆ ಇದನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಯಬೇಕು ಇಲ್ಲವಾದರೆ ದಲಿತ ಸಂಘಟನೆಯ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದುರ್ಗಾಭೋವಿ , ಮಂಜುನಾಥ್, ಸೋಮಶೇಖರ್, ಗಣಪತಿ, ಶರತ್ ಉಪಸ್ಥಿತರಿದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ