ಸಾಗರ:ವಿದ್ಯಾರ್ಥಿಗಳು ಯಾರು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಸಾಗರದ ನಾಗವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್, ಇಂಟರ್‌ನೆಟ್‌ನಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಮ್ಮ ಏಳಿಗೆಗೆ ಬಳಸಿಕೊಳ್ಳಬೇಕೆ ವಿನಃ, ಅದಕ್ಕೆ ದಾಸರಾಗಿ ತಪ್ಪುದಾರಿಯತ್ತ ಹೋಗಬಾರದು. ನನಗೂ ಉನ್ನತ ಶಿಕ್ಷಣ ಮಾಡಲು ಅವಕಾಶ ಸಿಕ್ಕಿದ್ದರೆ ಇನ್ಯಾವುದೋ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿತ್ತು. ಆದರೆ ಬಡತನ ನನ್ನಂತ ಅನೇಕ ಜನರ ಶಿಕ್ಷಣ ಮುಂದುವರೆಸಲು ತೊಡಕಾಗಿತ್ತು. ಈಗಿನ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಆರ್ಥಿಕ ಸಮಸ್ಯೆ ಇಲ್ಲ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿದೆ. ನಿಮಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕ ಸಮಸ್ಯೆ ಇದ್ದರೆ ನನ್ನನ್ನು ಭೇಟಿಯಾಗಿ, ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಜಗತ್ತಿಗೆ ನಾಯಕತ್ವ ನೀಡುವ ಹಂತಕ್ಕೆ ಭಾರತ ಬೆಳೆದಿದೆ ಎಂದರೆ ನಮ್ಮಲ್ಲಿನ ಶೈಕ್ಷಣಿಕ ಗುಣಮಟ್ಟವೂ ಪ್ರಮುಖ ಕಾರಣವಾಗಿದೆ. ದೊಡ್ಡದೊಡ್ಡ ರಾಷ್ಟ್ರಗಳು ನಮ್ಮ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆಂಪುಹಾಸು ಹಾಸಿ ಸ್ವಾಗತಿಸುತ್ತಿದೆ. ನಮ್ಮಲ್ಲಿ ಬೌದ್ಧಿಕ ಗುಣಮಟ್ಟ ಉತ್ಕೃಷ್ಟವಾಗಿದೆ. ಬದುಕಿನ ಬಗ್ಗೆ ಭರವಸೆ ಇರಿಸಿಕೊಳ್ಳುವ ಜೊತೆಗೆ ಪೋಷಕರು ಕಂಡ ಕನಸು ನನಸು ಮಾಡಿ, ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಮಕ್ಕಳು ಒಂದು ಹಂತಕ್ಕೆ ಹೋಗಿ ಸೂಕ್ತ ಹೊಣೆಗಾರಿಕೆ ಅರಿಯುವವರೆಗೂ ಅವರ ಬೆನ್ನಿಗೆ ಪೋಷಕರು ಇರಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ದೇವೇಂದ್ರ ಜಿ ನಾಯಕ್ ಎಸ್ಟಿಎಂಸಿ ಅಧ್ಯಕ್ಷರು ವಹಿಸಿದ್ದರು ಹಾಗೂ ವೇದಿಕೆಯಲ್ಲಿ ಕೆಡಿಪಿ ಸದಸ್ಯರಾದ ಪ್ರಭಾವತಿ ಚಂದ್ರಕಾಂತ್ , ಬಾನುಕುಳಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ವಿದ್ಯಾಶಂಕರ್ ಸದಸ್ಯರಾದ ಮಂಜುನಾಥ ನಾಯಕ,ರಾಜೇಶ್ ದೇವಾಡಿಗ, ನಾಗಮ್ಮ ಗೊಂಡ, ಹಿರಿಯರಾದ ಅಣ್ಣಪ್ಪ ನಾಯಕ್ ,ಮುಖಂಡರಾದ ಅಶೋಕ್ ಬೇಳೂರು, ಸಾಗರ ತಾಲ್ಲೂಕು ಸಹ ಶಿಕ್ಷಕರ ಸಂಘದಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ನಾಯಕ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ ಮತ್ತು ಈರಪ್ಪನಾಯಕ್ ಹಾಗೂ ವಿವಿಧ ಗ್ರಾಮ ಪಂಚಾಯತಿಯ ಸದಸ್ಯರುಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಸಿಂಗ್ ಡಿ ಮತ್ತಿತರರು ಹಾಜರಿ ಹಾಜರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









