ಮನೆ Blog ಚೋರರಿಗೊಂದು ಕಾಲ ಶೂರರಿಗೊಂದು ಕಾಲ ಎಂಬ ಹಾಡು ಶಾಸಕರಿಗೆ ಸರಿಹೊಂದುವುದಿಲ್ಲ ಹೇಡಿಗಳಿಗೊಂದು ಕಾಲ ಭ್ರಷ್ಟರಿಗೊಂದು ಕಾಲ...

ಚೋರರಿಗೊಂದು ಕಾಲ ಶೂರರಿಗೊಂದು ಕಾಲ ಎಂಬ ಹಾಡು ಶಾಸಕರಿಗೆ ಸರಿಹೊಂದುವುದಿಲ್ಲ ಹೇಡಿಗಳಿಗೊಂದು ಕಾಲ ಭ್ರಷ್ಟರಿಗೊಂದು ಕಾಲ ಎಂಬ ಹಾಡು ಸರಿ ಹೊಂದುತ್ತದೆ ಎಂದು ಅಪಹಾಸ್ಯ ಮಾಡಿದ ರತ್ನಾಕರ ಹೊನಗೋಡು….!!

109
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

ಆನಂದಪುರ:

ಸಾಗರ ತಾಲೂಕಿನ ಶಾಸಕರು ಕಾಂಗ್ರೆಸ್ ಪಕ್ಷಕ್ಕಾಗಿ ಕ್ಷಮಿಸಿದ ಮೂಲ ಕಾಂಗ್ರೆಸಿಗರನ್ನು ಬಿಟ್ಟು ಸುಳ್ಳರು, ಭ್ರಷ್ಟಾಚಾರಿಗಳು, ಮಧ್ಯ ಮಾರಾಟ ಮಾಡುವವರು ಮತ್ತು ಮೋಸಗಾರರನ್ನು ಬಲಗೈ ಆಗಿ ಇಟ್ಟುಕೊಂಡಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ರತ್ನಾಕರ ಹೊನಗೋಡು ಪ್ರಶ್ನಿಸಿದರು.

ಇವರು ಇಂದು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಅರಣ್ಯಾಧಿಕಾರಿಗಳು ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಅರಣ್ಯದಲ್ಲಿ ಸಾಗುವಳಿ ಮಾಡಿಕೊಂಡು ಬಂದಂತಹ ಕೆಲ ರೈತರಿಗೆ ಸುಳ್ಳು ಕೇಸ್ ಹಾಕಿಸಿ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಶಾಸಕರೆ ಮೂಲ ಕಾರಣ ಎಂದು ಆರೋಪಿಸಿದರು.

ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಾ,ತಾಲೂಕಿನ ಅಭಿವೃದ್ಧಿ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ಶಾಸಕರು ಹಣ ಮಾಡುವ ನಿಟ್ಟಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಆಸ್ತಿಯನ್ನು ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ವಿರೋಧವನ್ನು ವ್ಯಕ್ತಪಡಿಸಿದರು.

ಶಾಸಕರು ಗಣಪತಿ ಬಿಡುವ ವೇಳೆಗೆ ವೀರರಿಗೊಂದು ಕಾಲ ಶೂರರಿಗೊಂದು ಕಾಲ ಹಾಡಿಗೆ ಕುಣಿಯುತ್ತಾರೆ ಈ ಹಾಡು ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಯಡಿಯೂರಪ್ಪನಂತಹ ನಾಯಕರಿಗೆ ಸರಿಹೊಂದುವುದು ಆದರೆ ನಿಮಗೆ ಭ್ರಷ್ಟರಿಗೊಂದು ಕಾಲ ಹೇಡಿಗಳಿಗೊಂದು ಕಾಲ ಎಂಬ ಹಾಡು ಸರಿ ಹೊಂದುತ್ತದೆ ಎಂದು ಅಪಹಾಸ್ಯ ಮಾಡಿದರು.

ಜಾತ್ಯತೀತವಾಗಿ ,ಪಕ್ಷಾತೀತವಾಗಿ ಆಚರಿಸುವ ಗಣಪತಿ ಹಬ್ಬಕ್ಕೆ ಶಾಸಕರು ಟೀ ಶರ್ಟ್ ಕೊಟ್ಟು ಅಶಾಂತಿಯನ್ನು ಸೃಷ್ಟಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ಪೊಲೀಸರು ಇದರ ಮೇಲೆ ವೈಯಕ್ತಿಕವಾಗಿ ಕೇಸ್ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ಗ್ರಾಂ.ಪಂ ಅಧ್ಯಕ್ಷ ಗುರುರಾಜ್, ಪರಮೇಶ್ ಕಣ್ಣೂರು, ರೇವಪ್ಪ ಹೊಸಕೊಪ್ಪ,ಗುರು ಮದ್ಲೇ ಸರ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗುಂಪನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t