ನವಿ ಮುಂಬೈ: ಶಫಾಲಿ ವರ್ಮಾ, ದೀಪ್ತಿ ಶರ್ಮಾ ಅರ್ಧಶತಕದನೆರವಿನಿಂದ ಭಾರತ ತಂಡವು ಐಸಿಸಿ ವನಿತಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಕಳೆದುಕೊಂಡು ರನ್ 298 ಪೇರಿಸಿದೆ. ವಿಶ್ವಕಪ್ ಗೆಲ್ಲಬೇಕಾದರೆ ದಕ್ಷಿಣ ಆಫ್ರಿಕಾ 299 ರನ್ ಗಳಿಸಬೇಕಿದೆ.
ಮಳೆಯಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ,ದ.ಆಫ್ರಿಕಾ ಭಾರತವನ್ನು ಬ್ಯಾಟಿಂಗ್ ಗೆ ಆಮಂತ್ರಿಸಿತು. ಶಫಾಲಿ ಮತ್ತು ಸ್ಮೃತಿ ಉತ್ತಮ ಆರಂಭ ನೀಡಿದರು. ಅವರಿಬ್ಬರು ಮೊದಲ ವಿಕೆಟ್ ಗೆ 104 ರನ್ ಜೊತೆಯಾಟವಾಡಿದರು. ಶಫಾಲಿ 87 ರನ್ ಮಾಡಿದರೆ, ಸ್ಮೃತಿ 45 ರನ್ ಗಳಿಸಿದರು.

ಕಳೆದ ಪಂದ್ಯದ ಸ್ಟಾರ್ ಜೆಮಿಮಾ 24 ರನ್ ಗೆ ಔಟಾದರು. ನಾಯಕಿ ಹರ್ಮನ್ 20 ರನ್ ಮಾಡಿದರೆ, ಕೊನೆಯಲ್ಲಿ ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಉತ್ತಮ ಬ್ಯಾಟಿಂಗ್ ನಡೆಸಿದರು. ದೀಪ್ತಿ 58 ರನ್ ಮಾಡಿದರೆ, ರಿಚಾ 34 ರನ್ ಮಾಡಿದರು.
ಒಂದು ಹಂತದಲ್ಲಿ 320 ರನ್ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡ ಕಾರಣ ರನ್ ವೇಗ ನಿಂತಿತು. ದ.ಆಫ್ರಿಕಾ ಪರ ಆಯಬೊಂಗ ಕಾಕ ಮೂರು ವಿಕೆಟ್ ಪಡೆದರೆ, ಮಲಾಬಾ, ಡಿಕ್ಲಾರ್ಕ್, ಟ್ರಯಾನ್ ತಲಾ ಒಂದು ವಿಕೆಟ್ ಕಿತ್ತರು.ಕೇರಳ ವಿದ್ವತ್ ಕಾವೇರಪ್ಪ (7ಕ್ಕೆ 2 ವಿಕೆಟ್) ಮತ್ತು ವಿಜಯ್ ಕುಮಾರ್ ವೈಶಾಖ್ (14ಕ್ಕೆ 1) ದಾಳಿಗೆ ತತ್ತರಿಸಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಾಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









