ಮನೆ ಶಿವಮೊಗ್ಗ ಬೆಂಕಿ ತಗುಲಿ ಮನೆ ಸಂಪೂರ್ಣ ಹಾನಿ /ಶಾಸಕರ ಆಪ್ತರು ಸ್ಥಳಕ್ಕೆ ಬೇಟಿ.

ಬೆಂಕಿ ತಗುಲಿ ಮನೆ ಸಂಪೂರ್ಣ ಹಾನಿ /ಶಾಸಕರ ಆಪ್ತರು ಸ್ಥಳಕ್ಕೆ ಬೇಟಿ.

95
0

ಆನಂದಪುರ: ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ವಿಷಯ ತಿಳಿದು ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಆಪ್ತರು ಸ್ಥಳಕ್ಕೆ ಬೇಟಿ.

ಆನಂದಪುರ ಹೋಬಳಿ ಮದ್ಲೆಸರ ನ್ಯಾವಟಿ ಗ್ರಾಮದ ಮೂಲೆಗದ್ದೆ ಜಯಮ್ಮ ಕೋಂ ಕೃಷ್ಣಪ್ಪ ಅವರ ಮನೆಯಲ್ಲಿ ಬುಧವಾರ ರಾತ್ರಿ ಆಕಸ್ಮಿಕವಾಗಿ ಒಲಗೆ ಹಾಕಿದ್ದ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು. ಸರಿಸುಮಾರು 2 ಲಕ್ಷಕ್ಕು ಅಧಿಕ ಹಾನಿ ಯಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ವಿಷಯ ತಿಳಿದು ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಆಪ್ತರು ಸ್ಥಳಕ್ಕೆ ಧಾವಿಸಿ ಸಾಂತ್ವನ ಹೇಳಿ ಶಾಸಕರ ಪರವಾಗಿ ಧನ ಸಹಾಯ ಮಾಡಿ ಕಂದಾಯ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್.ಎಂ.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಅಶೋಕ್ ಬೇಳೂರು, ಉಮೇಶ್, ರಮಾನಂದ್, ರಹಮತುಲ್ಲಾ, ಅಶ್ವಿನ್, ಲೋಕಪ್ಪ ನಾರಿ, ಬೀರೇಶ್ ಎಂಎಲ್ ಈಶ್ವರಪ್ಪ ಇನ್ನಿತರರು ಇದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t