ಮನೆ ಶಿವಮೊಗ್ಗ ಶಿಕಾರಿಪುರ/ ಕೆಎಸ್ಆರ್‌ಟಿಸಿ ಬಸ್ ಕೆಳಗೆ ನಾಡಬಾಂಬ್ ಸ್ಫೋಟ..!!

ಶಿಕಾರಿಪುರ/ ಕೆಎಸ್ಆರ್‌ಟಿಸಿ ಬಸ್ ಕೆಳಗೆ ನಾಡಬಾಂಬ್ ಸ್ಫೋಟ..!!

28
0

ಶಿವಮೊಗ್ಗ, ಡಿಸೆಂಬರ್ 02: ಸೋಮವಾರ ಶಿವಮೊಗ್ಗದ (Shivamogga) ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಕೆಎಸ್ಆರ್‌ಟಿಸಿ ಬಸ್‌ನ ಕೆಳಭಾಗದಲ್ಲಿ ನಾಡಬಾಂಬ್ ಸ್ಫೋಟಗೊಂಡಿದ್ದು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ದೊಡ್ಡ ಅನಾಹುವೇನೂ ಆಗದೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳೆ ರಕ್ಷಣೆಗೆ ನಾಡಬಾಂಬ್​ ಬಳಸುತ್ತಿದ್ದ ರೈತರು

ಮುಡಬಸಿದ್ಧಾಪುರದಿಂದ ಶಿಕಾರಿಪುರಕ್ಕೆ ಆಗಮಿಸುತ್ತಿದ್ದ ಬಸ್ ಹಿರೇಕಲವತ್ತಿಯ ಬಳಿ ಸ್ಫೋಟ ಸಂಭವಿಸಿದ್ದು, ಜೋರಾದ ಸ್ಫೋಟದ ಸದ್ದಿನಿಂದಾಗಿ ಬಸ್ ತಕ್ಷಣವೇ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಟಿಸಿಗೆ ಡಿಕ್ಕಿ ಹೊಡೆದು ನಿಂತಿತ್ತು. ಬಸ್ ನಿಲ್ಲಿಸಿದ ಚಾಲಕ ಮತ್ತು ನಿರ್ವಾಹಕರಿಬ್ಬರೂ ಪರಿಶೀಲನೆಗೆಂದು ಇಳಿದಾಗ ನಾಡಬಾಂಬ್ ಸ್ಫೋಟಗೊಂಡಿರುವುದು ಬೆಳಕಿಗೆ ಬಂದಿದೆ. ಹಂದಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ನಾಡಬಾಂಬ್​ಗಳನ್ನು ಬಳಸುತ್ತಿದ್ದು,ಬಾಂಬ್ ಕೊಂಡೊಯ್ಯುವ ವೇಳೆ ರಸ್ತೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಸ್ಫೋಟದಿಂದ ತಪ್ಪಿಸಿಕೊಂಡ 45 ವಿದ್ಯಾರ್ಥಿಗಳು

ಅದೃಷ್ಟವಶಾತ್ 7 ನಿಮಿಷಗಳ ಹಿಂದೆಯೇ 45 ವಿದ್ಯಾರ್ಥಿಗಳು ಇದೇ ಬಸ್​ನಲ್ಲಿ ಪ್ರಯಾಣಿಸುತ್ತಿದ್ದು, ಅನಾಹುತದಿಂದ ಪಾರಾಗಿದ್ದಾರೆ. ಘಟನೆಯ ನಂತರ ಮಾತನಾಡಿರುವ ಬಸ್ ಚಾಲಕ ಬಸವರಾಜ್, ನಾಡಬಾಂಬ್ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t