ಮನೆ ಶಿವಮೊಗ್ಗ ಶಿವಮೊಗ್ಗದಲ್ಲಿ ವಿಶೇಷ ಚೇತನ ಯುವಕ ಯುವತಿಯರಿಗೆ ಉದ್ಯೋಗಧಾರಿತ ಕೌಶಲ್ಯಭಿವೃದ್ಧಿ ತರಬೇತಿ..!!

ಶಿವಮೊಗ್ಗದಲ್ಲಿ ವಿಶೇಷ ಚೇತನ ಯುವಕ ಯುವತಿಯರಿಗೆ ಉದ್ಯೋಗಧಾರಿತ ಕೌಶಲ್ಯಭಿವೃದ್ಧಿ ತರಬೇತಿ..!!

49
0

ಶಿವಮೊಗ್ಗ : ಸಕ್ಷಮಾ ಎಪಿಡಿ ಬೆಂಗಳೂರು, ಸಹಯೋಗದಲ್ಲಿ ಶಿವಮೊಗ್ಗದಲ್ಲಿ 18ರಿಂದ 40ವರ್ಷದ ವಯೋಮಿತಿಯ ವಿಶೇಷ ಚೇತನ ಯುವಕ-ಯುವತಿಯರಿಗೆ ಫೆಬ್ರವರಿ 1 ರಿಂದ ಉಚಿತವಾಗಿ 45 ದಿನಗಳ ಉದ್ಯೋಗಧಾರಿತ ಕೌಶಲ್ಯಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ.

ಕೇವಲ 25 ವಿಶೇಷ ಚೇತನರಿಗೆ ಅವಕಾಶವಿರುತ್ತದೆ. ತರಬೇತಿ ನಂತರ ಪಲಾನುಭವಿಗಳಿಗೆ ಬೆಂಗಳೂರು, ಮೈಸೂರ್, ಹುಬ್ಬಳ್ಳಿ, ಶಿವಮೊಗ್ಗ, ಮತ್ತು ಮಂಗಳೂರು ಇನ್ನೂ ಇತರ ಕಡೆ ಇರುವ ಪ್ರತಿಷ್ಠಿತ ಕಂಪನಿಗಳಲ್ಲಿ ವಿಶೇಷ ಚೇತನರಿಗಾಗಿ ಇರುವ ಉದ್ಯೋಗವನ್ನು ಕೊಡಿಸಲು ಸಹಾಯ ಮಾಡಲಾಗುವುದು.

ಆಸಕ್ತರು ಇದರ ಉಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ತರಬೇತಿಯನ್ನು ಸಕ್ಷಮಾ ಕಾರ್ಯಾಲಯ 4ನೇ ಕ್ರಾಸ್, ಹೊಸಮನೆ “ಬಡಾವಣೆ ಶಿವಮೊಗ್ಗ ಇಲ್ಲಿ ನಡೆಸಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಕುಮಾರ್ ಶಾಸ್ತ್ರಿ, ಮೊ. 9113836523, ಸುನಿತಾಶೆಟ್ಟಿ, ಮೊ. : 9380374575, ವಿನಾಯಕ್ 6360913683, ಇವರುಗಳನ್ನು ಸಂಪರ್ಕಿಸಬಹುದಾಗಿದೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ