ಮನೆ ಶಿವಮೊಗ್ಗ ಶಿವಮೊಗ್ಗ: ಲಿ|| ಬಿ.ಕೆ. ಪಾರ್ವತಮ್ಮನವರ ಪುಣ್ಯಸ್ಮರಣೆ ಹಾಗೂ ‘ಧರ್ಮ ಧುರಂಧರೆ’ ಗ್ರಂಥ ಲೋಕಾರ್ಪಣೆ..!!

ಶಿವಮೊಗ್ಗ: ಲಿ|| ಬಿ.ಕೆ. ಪಾರ್ವತಮ್ಮನವರ ಪುಣ್ಯಸ್ಮರಣೆ ಹಾಗೂ ‘ಧರ್ಮ ಧುರಂಧರೆ’ ಗ್ರಂಥ ಲೋಕಾರ್ಪಣೆ..!!

16
0

✒️ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ನಿವಾಸಿ, ಲಿಂಗೈಕ್ಯ ಶ್ರೀಮತಿ ಬಿ.ಕೆ. ಪಾರ್ವತಮ್ಮ (ಧರ್ಮಪತ್ನಿ ಲಿ|| ಕೆ.ವಿ. ರೇವಣ್ಣಪ್ಪನವರು) ಅವರ ಪುಣ್ಯಸ್ಮರಣೆ ಹಾಗೂ ಅವರ ಸಂಸ್ಕರಣ ಗ್ರಂಥ ‘ಧರ್ಮ ಧುರಂಧರೆ’ ಗ್ರಂಥ ಲೋಕಾರ್ಪಣೆ ಸಮಾರಂಭವು ಮಾರ್ಚ್ 25ರಂದು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರ:
ದಿನಾಂಕ: 25-03-2026, ಬುಧವಾರ
ಸಮಯ: ಬೆಳಿಗ್ಗೆ 10.30ಕ್ಕೆ
ಸ್ಥಳ: ‘ಸ್ವರ್ಗಪ್ಪ’, ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಬಸವಣ್ಣ ಬೀದಿ ಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಧರ್ಮ ಸಮಾರಂಭವು ನಾಡಿನ ವಿವಿಧ ಮಠಾಧೀಶರ ಪವಿತ್ರ ಉಪಸ್ಥಿತಿಯಲ್ಲಿ ಜರುಗಲಿದೆ ಮದ್ರಾಂಭಾಪುರಿ ಬಾಳೆಹೊನ್ನೂರಿನ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಡಾ. ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಶ್ರೀ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸೇರಿದಂತೆ ಕಾಶಿ ಪೀಠದ ಜಗದ್ಗುರುಗಳು ಡಾ. ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು ಸಾನಿಧ್ಯ ವಹಿಸಲಿದ್ದು ಈ ಪಂಚಪೀಠದ ಸ್ವಾಮಿಗಳ ದರ್ಶನವನ್ನು ಸಾರ್ವಜನಿಕರು ಪಡೆದು ಆಶೀರ್ವಾದವನ್ನು ಸ್ವೀಕರಿಸಬೇಕು.

ಕವಲೇದುರ್ಗದ ಶ್ರೀ ಡಾ. ಮರುಳಸಿದ್ದ ಸಿದ್ದ ಶಿವಾಚಾರ್ಯ ಸ್ವಾಮಿಗಳು, ಮಳಲಿ ಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹಾಗೂ ಕೋಣಂದೂರಿನ ಶ್ರೀ ಡಾ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಗ್ರಂಥ ಲೋಕಾರ್ಪಣೆ ಮತ್ತು ಮುಖ್ಯ ಅತಿಥಿಗಳು:

ಲಿ|| ಬಿ.ಕೆ. ಪಾರ್ವತಮ್ಮನವರ ಸ್ಮರಣಾರ್ಥ ಸಿದ್ಧಪಡಿಸಲಾದ ‘ಧರ್ಮ ಧುರಂಧರೆ’ ಎಂಬ ಅಭಿನಂದನಾ ಗ್ರಂಥವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ನಿರ್ದೇಶಕ ಮಹಾಲಿಂಗ ಶಾಸ್ತ್ರಿ, ಶಿವಮೊಗ್ಗ ವೀರ ಶೈವ ಲಿಂಗಾಯತ ಸೇವಾ ಸಮಾಜ ಅಧ್ಯಕ್ಷರು ಜ್ಯೋತಿಪ್ರಕಾಶ್ ಪಾಲ್ಗೊಳ್ಳಲಿದ್ದಾರೆ.

ಸರ್ವರಿಗೂ ಕಾರ್ಯಕ್ರಮಕ್ಕೆ ಆಮಂತ್ರಣ:
“ಜಗದ್ಗುರು ಪಂಚ ಪೀಠಾಧೀಶರ ಆಗಮನ ಹಾಗೂ ಧರ್ಮಸಭೆ ಮತ್ತು ಮಾತೃಶ್ರೀ ಪಾರ್ವತಮ್ಮನವರ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ ಶ್ರೀ ಜಗದ್ಗುರುಗಳ ಕೃಪೆಗೆ ಪಾತ್ರರಾಗಿ ಎಂದು ಕೋಣಂದೂರಿನ ಅಡಿಕೆ ವ್ಯಾಪಾರಿ ಕೆ.ಆರ್. ಪ್ರಕಾಶ್ ಮತ್ತು ಸಹೋದರರು ವಿನಂತಿಸಿಕೊಂಡಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t