ಮನೆ Blog ಶಿವಮೊಗ್ಗ ವೈನ್ ಶಾಪ್ ಮುಂದೆ ನಿಂತಿದ್ದ ಯುವಕನಿಗೆ ರಾಡಿನಿಂದ ಹಲ್ಲೆ ಸ್ಥಳದಲ್ಲೇ ಸಾವು….!

ಶಿವಮೊಗ್ಗ ವೈನ್ ಶಾಪ್ ಮುಂದೆ ನಿಂತಿದ್ದ ಯುವಕನಿಗೆ ರಾಡಿನಿಂದ ಹಲ್ಲೆ ಸ್ಥಳದಲ್ಲೇ ಸಾವು….!

42
0

ನಗರದ ಎಪಿಎಂಸಿ ತರಕಾರಿ ಮಾರ್ಕೆಟ್ ಎದುರಿನ ಶ್ರೀನಿಧಿ ವೈನ್ ಶಾಪ್ ಮುಂದೆ ನಿಂತಿದ್ದ ಯುವಕನಿಗೆ ರಾಡಿನಿಂದ ಹಲ್ಲೆ ನಡೆಸಲಾಗಿದ್ದು ಯುವಕ ಸ್ಥಳದಲ್ಲಿಯೇ ಸಾವುಕಂಡಿರುವ ಘಟನೆ ವರದಿಯಾಗಿದೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಗಲಾಟೆಯಾಗಿದೆ ಎನ್ನಲಾಗಿದೆ.
‎             
‎ಕಾಶೀಪುರದ ನಿವಾಸಿ ಅರುಣ್ ಯಾನೆ ಬೋಂಡಾ(26) ಎಂಬಾತ ಶ್ರೀನಿಧಿ ವೈನ್ಸ್ ಮುಂದೆ ನಿಂತಿರುವಾಗ ಈ ಹಲ್ಲೆ ನಡೆದಿದೆ. ಹಲ್ಲೆಯನ್ನ ಮೃತ ಅರುಣನ ಸಂಬಂಧಿಕರಿಂದಲೇ ನಡೆದಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. 30 ಸೆಕೆಂಡ್ ನಲ್ಲಿ ಈ ಘಟನೆ ನಡೆದಿದ್ದು ಆತನನ್ನ ಸ್ಥಳೀಯರೆ ಮೆಗ್ಗಾನ್ ಗೆ ಸಾಗಿಸಿದ್ದಾರೆ. ಮೆಗ್ಗಾನ್ ಮರಣೋತ್ತರ ಕೇಂದ್ರಕ್ಕೆ ಆತನ ಮೃತ ದೇಹವನ್ನ ಸಾಗಿಸಲಾಗಿದೆ.

‎ಈ ಕುರಿತು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಮದುವೆಯ ವಿಷಯದಲ್ಲಿ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಸ್ಥಳೀಯ ಮಾಹಿತಿ ಪ್ರಕಾರ ಅರುಣ್ ಪ್ರೀತಿಸಿ ಮದುವೆಯಾಗಿದ್ದು ಪ್ರೀತಿಸಿ ಮದುವೆಯಾದರೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಅಡಿಯಲ್ಲಿ ಪತ್ನಿಯ ಸಂಬಂಧಿಕರೆ ರಾಡಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ