ಆನಂದಪುರ:
ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಡಿ ರವಿಕುಮಾರ್ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರ ಹುಟ್ಟು ಹಬ್ಬದ ಪ್ರಯುಕ್ತ ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ,ಕೂಲಿ ಕಾರ್ಮಿಕರಿಗೆ, ಆಟೋ ಸ್ಟ್ಯಾಂಡಿನವರೆಗೂ ಸಿಹಿ ವಿತರಿಸಿ ಮಾತನಾಡಿದರು.
ಪ್ರಮೋದ್ ಮದ್ವರಾಜ್ ರವರು ರಾಜ್ಯ ರಾಜಕೀಯದಲ್ಲಿ ಹಲವಾರು ಸಚಿವ ಸ್ಥಾನಗಳನ್ನ ಅಲಂಕರಿಸಿ ನಿಷ್ಕಳಂಕವಾಗಿ ಆಡಳಿತ ನಡೆಸಿ ವಿಶಿಷ್ಟ ಸ್ಥಾನವನ್ನು ಹೊಂದುವ ಮೂಲಕ ಜನರ ನೋವು ಸಂಕಟಗಳಿಗೆ ತಕ್ಷಣ ಸ್ಪಂದಿಸುತ್ತಾ ಸಮಾಜ ಸೇವೆಯಲ್ಲಿ ಕಾರ್ಯನಿರತರಾಗಿ,ಯಾವುದೇ ಜಾತಿ, ಧರ್ಮ ,ಪಕ್ಷ ನೋಡದೆ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ತಮ್ಮದೇ ಟ್ರಸ್ಟ್ ನ ಮೂಲಕ ವೈಯಕ್ತಿಕವಾಗಿ ನೆರವಾಗುವ ಮಾನವೀಯಗುಣಗಳನ್ನು ಹೊಂದಿರುವ ನಾಯಕರು ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ತಿ,ನಾ ಶ್ರೀನಿವಾಸ್ ಮಾತನಾಡಿ ಪ್ರಮೋದ್ ಮಧ್ವರಾಜ್ ರವರು ರಾಜ್ಯ ಕಂಡ ಅಗ್ರಗಣ್ಯ ನ ರಾಜಕಾರಣಿಗಳಲ್ಲಿ ಒಬ್ಬರು. ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲರನ್ನೂ ಪ್ರೀತಿಯಿಂದ ಜನಸೇವೆ ಮಾಡುತ್ತ, ಪಾರದರ್ಶಕತೆ, ಸಹಾಯ ಹಸ್ತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಯಾವುದೇ ಜಾತಿ, ಧರ್ಮ ಅಥವಾ ಸಮುದಾಯದ ವ್ಯಕ್ತಿಯಾದರೂ ಸಹಾಯ ಕೇಳಿದರೆ ವೈಯಕ್ತಿಕವಾಗಿ ಮುಂದಾಗಿ ನೆರವಾಗುವ ಮಾನವೀಯ ನಾಯಕರರು ಇಂಥ ವ್ಯಕ್ತಿಗಳು ಸಮಾಜದಲ್ಲಿ ವಿರಳ ಈ ವ್ಯಕ್ತಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ರಾಷ್ಟ್ರೀಯ ಮೀನುಗಾರರ ಸಂಘದ ಸದಸ್ಯರು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಕಾಂತೇಶ್. ಡಾ. ಪ್ರತಿಮಾ. ಡಾ. ವಿನಯ್ ಶೇಖರ್,ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಪ್ರಮುಖರಾದ ವೆಂಕಟೇಶ್ ಚಂದಹಳ್ಳಿ, ಗಣಪತಿ ಯಡೇಹಳ್ಳಿ , ಮಂಜುರಾಜು, ಗಣಪತಿ ಸುಣಗಾರ, ನಾಗರತ್ನ. ಆಟೋ ಚಾಲಕ ಸಂಘದ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ. ಪ್ರಮುಖರಾದ ಮಂಜುನಾಥ್, ಸುಣಗಾರ ಧರ್ಮಣ್ಣ, ಬಾಲಚಂದ್ರ ,ಗೋಪಾಲ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









