ಮನೆ Blog ಸದಾಶಿಸ್ತು ಗಾಂಭೀರ್ಯದಿಂದ ಇರುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಗಣಪತಿ ಪ್ರತಿಷ್ಠಾಪನೆ.

ಸದಾಶಿಸ್ತು ಗಾಂಭೀರ್ಯದಿಂದ ಇರುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಗಣಪತಿ ಪ್ರತಿಷ್ಠಾಪನೆ.

160
0

ಆನಂದಪುರ:

ಸದಾ ಶಿಸ್ತು ಗಾಂಭೀರ್ಯದಿಂದ ತುಂಬಿ ತುಳುಕಾಡುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಪೊಲೀಸರು ಠಾಣೆಯಲ್ಲಿಯೇ ಇಂದು ಪರಿಸರ ಸ್ನೇಹಿ ವಿಘ್ನ ನಿವಾರಕನಾದ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ ಸಂತೋಷದಿಂದ ಹಬ್ಬವನ್ನು ಆಚರಿಸಿದರು.

ಗಣಪತಿ ಹಬ್ಬ ಎಂದರೆ ಪೊಲೀಸರಿಗೆ ಬಿಡುವಿಲ್ಲದಷ್ಟು ಕೆಲಸ, ಯಾರು ಸಹ ಊರಿಗೆ ಹೋಗಿ ತಮ್ಮ ಕುಟುಂಬದೊಂದಿಗೆ ಹಬ್ಬ ವನ್ನೂ ಆಚರಣೆ ಮಾಡಲು ಆಗುವುದಿಲ್ಲ ಆದ್ದರಿಂದ ವಿಶೇಷವಾಗಿ ಠಾಣೆಯಲ್ಲಿ ಯೇ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದರು.

ಹಾಗೆ ಸಂಜೆ ವೇಳೆ ಗಣಪತಿಗೆ ಪೂಜೆ ಸಲ್ಲಿಸಿ ಗಾಣಿಗನ ಕೆರೆಯಲ್ಲಿ ವಿಸರ್ಜನಾ ಕಾರ್ಯವನ್ನು ಸಹ ನೆರವೇರಿಸಿದರು.

ಪಿ ಎಸ್ ಐ ಪ್ರವೀಣ್ ಗಣಪತಿ ವಿಸರ್ಜನೆಗೆ ಗಣಪತಿ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿರುವ ಪೋಟೋ.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಸಿದ್ದರೂಡ, ವೆಂಕಟೇಶ್, ದೇವಿದಾಸ್, ಹಾಗೂ ಸಿಬ್ಬಂದಿಗಳಾದ ದಿವಾಕರ್, ತಾಹಿರ್, ಅಶೋಕ್, ಉಮೇಶ್, ಧನಂಜಯ್ ,ನಿರಂಜನ್, ಸಂತೋಷ್, ಅವಿನಾಶ್, ನೂತನ್, ಜನಾರ್ಧನ್, ಹರ್ಷ,ಸುನಿಲ್, ಪ್ರಶಾಂತ್ ಹಾಗೂ ಇನ್ನಿತರರು ಇದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t