ಆನಂದಪುರ:ತಂದೆ ತಾಯಿಗಳು ಮಕ್ಕಳದ ಭವಿಷ್ಯ ಬಗ್ಗೆ ಉತ್ತಮವಾದ ಕನಸನ್ನು ಕಂಡಿರುತ್ತಾರೆ ಅದಕ್ಕೆ ಚ್ಯುತಿ ತರದಂತೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆಯಿರಿ ಎಂದು ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಕೆ ತಿಳಿಸಿದರು.
ಇವರು ಆನಂದಪುರದ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಶಾರದಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಸಿ ಮಾಡಿ ಮಾತನಾಡಿದರು.
ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಆಕರ್ಷಣೆ ಆಗುತ್ತದೆ ಅದಕ್ಕೆಲ್ಲ ಮನಸೋತು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದೆ, ಇರುವ ಸಮಯದಲ್ಲಿಯೇ ಆದಷ್ಟು ಓದಿನ ಕಡೆ ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯ ಕ್ರಮದ ಅದ್ಯಕ್ಷತೆ ವಹಿಸಿದ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕರಾದ ಡಿ.ಎಂ. ದೇವರಾಜ ಮಾತನಾಡಿ ನಮ್ಮ ವಿದ್ಯಾಸಂಸ್ಥೆಗಳು ಪ್ರತಿ ವರ್ಷ ಸತತವಾಗಿ ಎಸ್. ಎಸ್ .ಎಲ್. ಸಿ ಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುತ್ತಿದೆ ಹಾಗೆ ನಮ್ಮ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್ ಕಡೆಗೆ ಕೊಡುವ ಆಸಕ್ತಿ ಹಾಗೂ ಗಮನವನ್ನು ಶಿಕ್ಷಣದ ಕಡೆಗೆ ಕೊಟ್ಟು ಆಸಕ್ತಿ ಇಂದ ಓದಿದರೆ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತೀರ ಎಂದರು.
ನಮ್ಮ ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಚೆನ್ನಾಗಿ ಓದಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುವುದರ ಮೂಲಕ ಹೆಸರು ಗಳಿಸಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮೂಕಾಂಬು, ಗ್ರಾ.ಪಂ ಸದಸ್ಯರಾದ ಮೋಹನ್ ಕುಮಾರ್, ಗಜೇಂದ್ರ ಆರ್ ,ರೂಪಲತಾ, ರಾಘವೇಂದ್ರ ಸಿ,ಸಿರಿಜಾನ್, ಲಲಿತಮ್ಮ, ಸೌಮ್ಯ , ನೇತ್ರಾವತಿ, ನವೀನ್ ರವೀಂದ್ರ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









