ಮನೆ ಶಿವಮೊಗ್ಗ ಸಮಾಜ ಪರಿವರ್ತನಾ ಟ್ರಸ್ಟ್ ,ಕಾಲೇಜಿಗೆ ಸ್ಮಾರ್ಟ್ ಟಿವಿ ಕೊಡುಗೆ..!!

ಸಮಾಜ ಪರಿವರ್ತನಾ ಟ್ರಸ್ಟ್ ,ಕಾಲೇಜಿಗೆ ಸ್ಮಾರ್ಟ್ ಟಿವಿ ಕೊಡುಗೆ..!!

73
0

ಸಾಗರ: ಆಧುನಿಕತೆಗೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ಭೋದನೆ ಮಾಡಲು ಶಾಲೆಗಳಿಗೆ ಸ್ಮಾರ್ಟ್ ಟಿವಿಗಳ ಅಗತ್ಯವಿದೆ’ ಎಂದು ತುಮರಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಹರೀಶ್ ಹೇಳಿದರು.

ಇಲ್ಲಿನ ತುಮರಿ ಪದವಿಪೂರ್ವ ಕಾಲೇಜಿಗೆ ಶನಿವಾರ ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ₹20 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಟಿವಿ ಸ್ವಿಕರಿಸಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳು ಸ್ಮಾರ್ಟ್ ತರಗತಿಗಳಿಗೆ ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಕೊಡುಗೆ ಸಂತಸದ ವಿಚಾರ ಎಂದರು.ಉಪನ್ಯಾಸಕ ಸುಬ್ರಹ್ಮಣ್ಯ ಮಾತನಾಡಿ ಓದಿದ ಶಾಲೆಯ ಬಗ್ಗೆ ಕಾಳಜಿ ಜೊತೆಗೆ ಈ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯವು ಯುವ ಸಮುದಾಯಕ್ಕೆ ಹೆಚ್ಚಿನ ಉಪಯೋಗ ಆಗಲಿದೆ ಎಂದರು.

ಉಪನ್ಯಾಸಕ ರಾಚಪ್ಪ , ಸಮಾಜ ಪರಿವರ್ತನಾ ಸಂಚಾಲಕರಾದ ಪ್ರವೀಣ್, ಆನಂದ್, ಅರುಣ್ ಕರೂರು ಇದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :https://chat.whatsapp.com/CnYYumPSez6AMYyw8cHG9A?mode=ac_t