ಸಾಗರ: ಸಾಗರದ ಕೆ .ಎಸ್ .ಆರ್ .ಟಿ ಸಿ. ಬಸ್ ಚಾಲಕ ನಾಗಪ್ಪ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಸಾಗರದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ನಾಗಪ್ಪ (55) ತಂದೆ ಬಂಗಾರಪ್ಪ ತ್ಯಾಗರ್ತಿ ಮೂಲದವರು ಎಂದು ತಿಳಿದು ಬಂದಿದೆ.
ಮೃತ ನಾಗಪ್ಪ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು ಇದನ್ನು ತಿಳಿದು ಹೆಂಡತಿ ಹಾಗೂ ಮಗ ಕೇಳಿದಾಗ ಮ್ಯಾನೇಜರ್ ಡ್ಯೂಟಿಗೆ ಹೇಳಿಲ್ಲ ಹಾಗಾಗಿ ನಾನು ಮನೆಯಲ್ಲಿ ಇದ್ದೇನೆ ಎಂಬ ಉತ್ತರ ನೀಡಿರುವುದಾಗಿ ತಿಳಿದು ಬಂದಿದೆ.
ಕೆಲಸಕ್ಕೆ ಹೋಗದ ವಿಚಾರವಾಗಿ ಊಟ,ತಿಂಡಿ, ನಿದ್ರೆ ,ಯನೆಲ್ಲಾ ಬಿಟ್ಟು ಮನಸ್ಸಿಗೆ ಹಚ್ಚಿಕೊಂಡು ಜನವರಿ 5ರ ಸೋಮವಾರ ಸಂಜೆ ವೇಳೆಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಗಡೆ ಮರದ ತೊಲೆಗೆ ನೇಣು ಕುತ್ತಿಗೆಗೆ ಬಿಗಿದುಕೊಂಡಿದ್ದು ಸಾಯಲು ಮುಂದಾಗಿದ್ದರು.

ತಕ್ಷಣ ನಾಗಪ್ಪ ನ ಹಿರಿಯ ಮಗ ರಾಕೇಶ್ ನೋಡಿ ನೇಣು ಕುಣಿಕೆಯಿಂದ ಕೆಳಗೆ ಇಳಿಸಿ ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಜ 7 ರ ಗುರುವಾರದಂದು ನಾಗಪ್ಪ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣವು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
✒️.. ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









