ಮನೆ Blog *ಸಾಗರದ ಜನ್ನತ್ ಗಲ್ಲಿ ಗಣಪತಿ ಮೆರವಣಿಗೆ ಮೇಲೆ ಐದು ವರ್ಷದ ಬಾಲಕರು ಉಗಿದ ವಿಡಿಯೋ ವೈರಲ್-...

*ಸಾಗರದ ಜನ್ನತ್ ಗಲ್ಲಿ ಗಣಪತಿ ಮೆರವಣಿಗೆ ಮೇಲೆ ಐದು ವರ್ಷದ ಬಾಲಕರು ಉಗಿದ ವಿಡಿಯೋ ವೈರಲ್- ಕ್ಷಮೆಯಾಚಿಸಿದ ಪೋಷಕರು..!!*

125
0

ಸಾಗರ:

ಸಾಗರ ಪಟ್ಟಣದ ಜನ್ನತ್ ಗಲ್ಲಿಯ ಗಣಪತಿ ಮೂರ್ತಿಯ ರಾಜಬೀದಿ ಉತ್ಸವದ ಮೇಲೆ ಐದು ವರ್ಷದ ಬಾಲಕನೋರ್ವನಿಂದ ಉಗಿದಿರುವ ಘಟನೆ ನಡೆದಿದ್ದು ಇಬ್ಬರೂ ಬಾಲಕರನ್ನ ಪೊಲೀಸರು ಸೆಕ್ಯೂರ್ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇಂದು ಸಾಗರ ಪಟ್ಟಣದ ಜನ್ನತ್ ಗಲ್ಲಿಯಲ್ಲಿ ಜೈಭುವನೇಶ್ವರಿ ಗಣಪತಿಯ ರಾಜಬೀದಿ ಉತ್ಸವ ನಡೆದಿದ್ದು ಗಲ್ಲಿಯಲ್ಲೇ ಇಬ್ಬರು ಬಾಲಕರು ಮೆರವಣಿಗೆಯ ಮೇಲೆ ಉಗಿದಿರುವ ವಿಡಿಯೋವೊಂದು ವೈರಲ್ ಆಗಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು. ಇಬ್ಬರು ಮಕ್ಕಳಿಂದ ಗಣೇಶನ ಮೆರವಣಿಗೆ ಮೇಲೆ ಉಗಳುವ ವಿಡಿಯೋ ವೈರಲ್ ಆಗಿದ್ದು ಇದನ್ನು ಗಮನಿಸಿದ ಮೆರವಣಿಗೆಯಲ್ಲಿ ಹೋಗುತ್ತಿದ್ದ ಹಿಂದೂ ಪರ ಸಂಘಟನೆಗಳು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

ಗಣಪತಿಗೆ ಅವಮಾನ ಮಾಡಿದವರ ವಿರುದ್ಧ ಪೊಲೀಸರು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನ ಪ್ರತಿಭಟನಾಕಾರರು ಕೈಬಿಟ್ಟಿದ್ದಾರೆ. ಇದರಿಂದ ಗಣೇಶನ ಮೆರವಣಿಗೆ ಮುಂದುವರೆದಿದೆ. ಕೆಲ ಹೊತ್ತು ಸ್ಥಳದಲ್ಲಿ ಬಿಡುವಿನ ವಾತಾವರಣ ನಿರ್ಮಾಣವಾಗಿತ್ತಾದರೂ ಸಹ ಪೋಲೀಸರ ಮದ್ಯಪ್ರವೇಶದಿಂದ ತಿಳಿಯಾಗಿದೆ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳದಲ್ಲೆ ಎಸ್ಪಿ ಮಿಥುನ್ ಕುಮಾರ್ ಮೊಕ್ಕಂ ಹೂಡಿದ್ದಾರೆ.ಇದರ ಬೆನ್ನಲ್ಲೇ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ವಿಡಿಯೋದಲ್ಲಿ ಐದು ವರ್ಷದ ಮಕ್ಕಳಿಬ್ವರಿದ್ದು ಅದರಲ್ಲಿ ಓರ್ವ ಬಾಲಕ ಮೆರವಣಿಗೆಯ ಮೇಲೆ ಉಗಿದಿರುವುದು ಕಂಡು ಬಂದಿದೆ. ಇಬ್ಬರೂ ಮಕ್ಕಳನ್ನ ಸೆಕ್ಯೂರ್ ಮಾಡಲಾಗಿದೆ. ಅವರ ಪೋಷಕರು ಈ ಘಟನೆ ಕುರಿತು ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

‌ಗಣಪತಿಯ ರಾಜಬೀದಿ ಉತ್ಸವಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ರಾಜಬೀದಿ ಉತ್ಸವ ಮುಂದೆ ಸಾಗುತ್ತಿದೆ. ಉಳಿದಂತೆ ಎಲ್ಲವೂ ಶಾಂತಿ ರೀತಿಯಲ್ಲಿದೆ ಎಂದು ತಿಳಿಸಿದರು. ಮಕ್ಕಳು ಮತ್ತು ತಾಯಿ ಕರೆದು ಪೊಲೀಸರ ವಿಚಾರಣೆ ನಡೆಸಿದ್ದು ತಾಯಿಯಿಂದ ಮಕ್ಕಳು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.