
ಆನಂದಪುರ:
ಸಾಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಶ್ವತ ಉಪನ್ಯಾಸಕರನ್ನು ನೇಮಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಮಾಡುತ್ತೇವೆ ಎಂದು ರತ್ನಾಕರ ಹೊನಗೋಡು ಎಚ್ಚರಿಕೆ ನೀಡಿದರು.
ಇವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಸಾಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕ ಇಲ್ಲದೆ ಬಹಳಷ್ಟು ದಿನ ಆಗಿದೆ ಇದರಿಂದ ಕಾಲೇಜಿನಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿರುವುದು ಯಾರಿಗೂ ತಿಳಿಯುತ್ತಿಲ್ಲವೆ.

ಶಾಸಕರಂತೂ ಗಮನ ಹರಿಸುವುದಿಲ್ಲ ಆದರೆ ನಮ್ಮ ಕ್ಷೇತ್ರದಲ್ಲಿಯೆ ಶಿಕ್ಷಣ ಸಚಿವರು ಇದ್ದು ಇದರ ಬಗ್ಗೆ ಗಮನ ಹರಿಸುತ್ತಿಲ್ಲದಿರುವುದು ವಿಪರ್ಯಾಸವಾಗಿದೆ.ಉಪನ್ಯಾಸಕರಿಲ್ಲದೆ ಬಡ ವಿದ್ಯಾರ್ಥಿಗಳು ಕಾಲೇಜನ್ನು ತೊರೆಯುವ ಪರಿಸ್ಥಿತಿ ಎದುರಾಗಿದೆ.
ಒಂದು ದಿನಗಳಲ್ಲಿಯೇ ಶಾಶ್ವತವಾಗಿ ಉಪನ್ಯಾಸಕರನ್ನು ಪ್ರಥಮ ದರ್ಜೆ ಕಾಲೇಜಿಗೆ ನೇಮಿಸದಿದ್ದರೆ ಹಾಲಪ್ಪನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಂ.ಪಂ ಅಧ್ಯಕ್ಷ ಗುರುರಾಜ್, ಪರಮೇಶ್ ಕಣ್ಣೂರು, ರೇವಪ್ಪ ಹೊಸಕೊಪ್ಪ,ಗುರು ಮದ್ಲೇ ಸರ ಇನ್ನಿತರರು ಉಪಸ್ಥಿತರಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








