ಮನೆ ಶಿವಮೊಗ್ಗ ಸಾಗರ: ಸರ್ವೇ ಕಾರ್ಯದ ವೇಳೆ ಗುಂಪು ಹಲ್ಲೆ/ ಕೊಲೆ ಯತ್ನದ ಪ್ರಕರಣ ದಾಖಲು..!!

ಸಾಗರ: ಸರ್ವೇ ಕಾರ್ಯದ ವೇಳೆ ಗುಂಪು ಹಲ್ಲೆ/ ಕೊಲೆ ಯತ್ನದ ಪ್ರಕರಣ ದಾಖಲು..!!

110
0

ಸಾಗರ: ತಾಲೂಕಿನ ಆನಂದಪುರ ಸಮೀಪದ ತ್ಯಾಗರ್ತಿಯ ಮಳ್ಳ ಕೊಪ್ಪ ಗ್ರಾಮದಲ್ಲಿ ಹೈ ಟೆನ್ಷನ್ ವಿದ್ಯುತ್ ಲೈನ್ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದವರ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಶನಿವಾರ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ:
ಮಳ್ಳಾಕೊಪ್ಪ ಗ್ರಾಮದ ಸರ್ವೇ ನಂ. 71/3ರಲ್ಲಿ ಶಿವಕುಮಾರ್ ಎಂಬುವವರ ಜಾಗದಲ್ಲಿ ಶನಿವಾರ ಮಧ್ಯಾಹ್ನ 1:30ರ ಸುಮಾರಿಗೆ ಸರ್ವೇಯರ್ ಮಲ್ಲನಗೌಡ ಹಾಗೂ ತಂಡದವರು ಹೈ ಟೆನ್ಷನ್ ವೈಯರ್ ಅಳವಡಿಕೆ ಸಂಬಂಧ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆರೋಪಿಗಳಾದ ಸಂಜು, ಸಂತೋಷ್, ರಾಘವೇಂದ್ರ, ಸಚಿನ್, ಸತೀಶ್, ಸುದೀಪ್ ಹಾಗೂ ಪರಮೇಶ್ ಎಂಬುವವರು ಎಲ್ಲಾ ಕೊಪ್ಪ ಗ್ರಾಮದರಾಗಿದ್ದು ಇವರುಗಳು “ನಿಮಗೆ ಇಲ್ಲಿ ಕೆಲಸ ಮಾಡಲು ಹೇಳಿದವರು ಯಾರು?” ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿದ್ದಾರೆ.

ಮಾರಕಾಸ್ತ್ರಗಳಿಂದ ದಾಳಿ:
ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಲ್ಲಿದ್ದ ದೊಣ್ಣೆ ಹಾಗೂ ಕಲ್ಲುಗಳಿಂದ ಸರ್ವೇಯರ್ ಮಲ್ಲನಗೌಡ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಇದನ್ನು ತಡೆಯಲು ಹೋದ ದಾವಣಗೆರೆಯ ಬಸವಾಪುರ ಗ್ರಾಮದ ಪರಶುರಾಮ (40) ಎಂಬುವವರ ಮೇಲೆ ಆರೋಪಿಗಳು ಮುಗಿಬಿದ್ದಿದ್ದಾರೆ ಎನ್ನಲಾಗಿದೆ.

ದೂರಿನ ಪ್ರಕಾರ, ಪರಶುರಾಮನನ್ನು ಅಟ್ಟಾಡಿಸಿಕೊಂಡು ಹೋದ ಆರೋಪಿಗಳು, ಕುಮಾರಗೌಡ ಎಂಬುವವರ ಮನೆಯ ಬಳಿ ಅವರನ್ನು ಕೆಳಗೆ ಬೀಳಿಸಿ ತಲೆ ಹಾಗೂ ಎದೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿದ್ದಾರೆ.” ಈ ವೇಳೆ ಕುಮಾರಗೌಡ ಎಂಬುವವರು ಸ್ಥಳಕ್ಕೆ ಬಂದಿದ್ದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಪಿ.ಎಸ್.ಐ ಪ್ರವೀಣ್ ಅವರ ತಂಡ ತನಿಖೆ ನಡೆಸುತ್ತಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t