ಮನೆ ಶಿವಮೊಗ್ಗ ಸಾಲ ಭಾದೆ ತಾಳಲಾಗದೆ ರೈತ ಆತ್ಮಹತ್ಯೆ…!!

ಸಾಲ ಭಾದೆ ತಾಳಲಾಗದೆ ರೈತ ಆತ್ಮಹತ್ಯೆ…!!

131
0

.ಆನಂದಪುರ:

ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದ ರೈತ ಗಾಮಪ್ಪ (60) ಸಾಲ ಭಾದೆ ತಾಳಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೆನ್ನಶೆಟ್ಟಿಕೊಪ್ಪ ದ ಈರಪ್ಪ ಮಗನಾದ ಗಾಮಪ್ಪ (60) ಜಮೀನಲ್ಲಿ ಅಡಿಕೆ, ಶುಂಠಿ ,ಭತ್ತ ,ಕಬ್ಬು ಬೆಳೆಯುತ್ತಿದ್ದು ಈ ವರ್ಷದ ವಿಪರೀತವಾದ ಮಳೆಯಿಂದ ಅಡಿಕೆಗೆ ಕೊಳೆ ರೋಗ ಹಾಗೂ ಶುಂಠಿ ಗೆ ಎಲೆ ಚುಕ್ಕಿರೋಗ ಬಂದು ಬೆಳೆ ನಾಶವಾಗಿರುತ್ತದೆ.

ಇದರಿಂದ ದಿನ ಇದೇ ಚಿಂತೆ ಮಾಡುತ್ತಿದ್ದು ಬೆಳೆಯನ್ನು ಬೆಳೆಯಲು ಸೊಸೈಟಿಯಲ್ಲಿ 20,000 ರೂ. ನಗದು ಸಾಲ 40.000 ರೂ, ಬೈಕಿನ ಮೇಲಿನ ಸಾಲ 40,000 ರೂ, ಕೃಷಿ ಪತ್ತಿನ ಸಹಕಾರಿ ಸಂಘ ನಂದಿತಳೆಯಲ್ಲಿ ಸಾಲ ಮಾಡಿಕೊಂಡಿದ್ದು, ಸಾಗರದ ಅಡಿಕೆ ಮಂಡಿಯಲ್ಲಿ ಮುಂಗಡ ಸಾಲವಾಗಿ 50,000 ರೂ ಮತ್ತು ಊರಿನವರು ಮತ್ತು ಸಂಬಂದಿಕರೊಂದಿಗೆ 3.00.000 ರೂಗಳನ್ನು ಕೈಸಾಲ ಮಾಡಿಕೊಂಡಿರುತ್ತಾರೆ.

ಬೆಳೆ ಹಾನಿಯಾದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಸಾಲದ ಭಾದೆ ಯಿಂದ ಮನನೊಂದು ಗುರುವಾರ ಸಂಜೆ 05.00 ಗಂಟೆಗೆ ಬೆಳೆಗೆ ತಂದ ಔಷದಿಯಾದ ಏಕಲಕ್ಸ್ ಕೀಟನಾಶಕವನ್ನು ಮನೆ ಹಿಂದಿನ ಅಡಿಕೆ ತೋಟದಲ್ಲಿ ಸೇವನೆ ಮಾಡಿದ್ದಾರೆ. ಕೂಡಲೆ ಆನಂದಪುರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಎರಡು ದಿವಸ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಈ ಪ್ರಕರಣವು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t