ಮನೆ Blog ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ : ಶಾಸಕ ಗೋಪಾಲಕೃಷ್ಣ ಬೇಳೂರು..!!

ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ : ಶಾಸಕ ಗೋಪಾಲಕೃಷ್ಣ ಬೇಳೂರು..!!

12
0

ಸಾಗರ:(ತುಮರಿ) ಮೂಢನಂಬಿಕೆಗಳು ಸಮಾಜದ ಅಭಿವೃದ್ದಿಗೆ ಮಾರಕವಾಗಿವೆ. ಇವುಗಳಿಂದ ಹೊರಬರದ ಹೊರತು ಅಭಿವೃದ್ದಿ ಸಾಧ್ಯವಿಲ್ಲ. ಸ್ವಾರ್ಥಸಾಧನೆಗೆ ಜನಸಮೂಹವನ್ನು ಬಳಸಿಕೊಳ್ಳುವ ಪಟ್ಟಭದ್ರರು ಹೆಣೆದಿರುವ ಈ ಕುಟಿಲ ತಂತ್ರಗಳಿಂದ ಎಚ್ಚತ್ತೆಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ಶೇಷಪ್ಪ ನಾಯ್ಕ ವೇದಿಕೆಯಲ್ಲಿ ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾನವನು ಭಕ್ತಿಯ ಪರಾಕಾಷ್ಠೆಯ ನಡುವೆ ಮೌಢ್ಯದತ್ತ ಸಾಗುವುದು ಸಲ್ಲದು, ಮೂಢನಂಬಿಕೆ ಬಿಡಲು ಪ್ರಯತ್ನಿಸಬೇಕು. ಸಿಗಂದೂರು ದೇವಸ್ಥಾನಎಲ್ಲರ ಒಳಗೊಳ್ಳುವಿಕೆ ಮೂಲಕ ಸರ್ವ ಧರ್ಮದ ಆರಾಧ್ಯ ಕೇಂದ್ರವಾಗಿ, ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸ ತಂದಿದೆ ಎಂದರು.

ಶ್ರೀ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಳವನ್ನು ಅರಿತು ಸರ್ಕಾರ ಸೇತುವೆ ನಿರ್ಮಾಣ ಮಾಡಿದೆ ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ, ಈ ಭಾಗದ ಜನರಿಗೆ ಚೈತನ್ಯ ಸಿಗಂದೂರು ದೇವಿಯೇ ಎಂದು ಧರ್ಮಾಧಿಕಾರಿ ಎಸ್ ರಾಮಪ್ಪ ಅಭಿಪ್ರಾಯ ಪಟ್ಟರು.

ವೇದಿಕೆಯಲ್ಲಿ ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಚಂದ್ರಮೂರ್ತಿ ಹೆಸಿಗೆ, ಕಲಸೆ ಚಂದ್ರಪ್ಪ, ಹೊಳೆಯಪ್ಪ, ಅನಿತಾ ಕುಮಾರಿ ಉಪಸ್ಥಿತರಿದ್ದರು. ದೇವಸ್ಥಾನದ ಕಾರ್ಯದರ್ಶಿ ರವಿ ಕುಮಾರ್ ಹೆಚ್ ಆರ್ ಸ್ವಾಗತಿಸಿದರು.

ಸೀಗೇ ಕಣಿವೆಯಲ್ಲಿ ಭಕ್ತರ ಸಮಾಗಮ:
ನಾಡಿನ ಭಕ್ತರ ಆರಾಧ್ಯ ದೇವತೆ ಸಿಗಂದೂರು ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಬುಧವಾರ ವಿದ್ಯುಕ್ತವಾಗಿ ಆರಂಭಗೊಂಡಿತು. ಶರಾವತಿ ಹಿನ್ನೀರಿನಲ್ಲಿ ಮುಳುಗಿರುವ ಸೀಗೇ ಕಣಿವೆಯಲ್ಲಿ ನವಚಂಡಿಕಕಾ ಹವನ ಸೇರಿದಂತೆ ಆನೇಕ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದವು.

ಮೂಲ ಸ್ಥಾನ ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿ ಬೆಳಗಿಸುವ ಸಾಂಪ್ರದಾಯಿಕ ಆಚರಣೆಯ ಮೂಲಕ ಸಿಗಂದೂರು ದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.

ಜಾತ್ರೆಯ ಅಂಗವಾಗಿ ಸೀಗೇ ಕಣಿವೆಯಲ್ಲಿ ಪ್ರಾತಕಾಲದಿಂದಲೇ ನವಚಂಡಿಕಕಾ ಹವನ, ಚಂಡಿಕಾ ಹವನ ಆನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಸಾರಗನ ಜಡ್ಡು ಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೇರವೇರಿದವು.

ನಂತರ ಅಶೀರ್ವಚನ ನೀಡಿದ ಅವರು, ಸಂಕ್ರಾಂತಿ ಹಬ್ಬವು ಎಲ್ಲ ಸಮುದಾಯದವರಿಗೆ ಸಮೃದ್ಧಿಯನ್ನು ತರಲಿ ಎಂದು ಸಾರಗನ ಜಡ್ಡು ಯೋಗೇಂದ್ರ ಸ್ವಾಮೀಜಿ ಶುಭ ಹಾರೈಸಿದರು.

ದೇವಿಯ ದರ್ಶನ ಪಡೆದ ಗಣ್ಯರು :

ಜಾತ್ರೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯಾನಾಯ್ಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ, ನಿರ್ದೇಶಕ ಶೀಕಾಂತ್ ಸೇರಿದಂತೆ ಆನೇಕ ಗಣ್ಯರು ದೇವಿ ದರ್ಶನ ಪಡೆದರು.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ