ಮನೆ Blog ಸಿಗಂದೂರು 2ನೇ ದಿನವು ವಿಶೇಷ ಪೂಜೆ: ಜಾತ್ರಾ ಮಹೋತ್ಸವಕ್ಕೆ ತೆರೆ.

ಸಿಗಂದೂರು 2ನೇ ದಿನವು ವಿಶೇಷ ಪೂಜೆ: ಜಾತ್ರಾ ಮಹೋತ್ಸವಕ್ಕೆ ತೆರೆ.

59
0

ಸಾಗರ:ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ಎರಡನೇ ದಿನವು ದೇವಿಗೆ ವಿಶೇಷ ಪೂಜೆ ನೇರವೇರಿತು.

ಗುರುವಾರ ಬೆಳಿಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ,ಅರ್ಚನೆ ನವ ಚಂಡಿಕಾ ಹೋಮ ನೆರವೇರಿತು. ದೇವಸ್ಥಾನದ ಧರ್ಮದರ್ಶಿ ಎಸ್ ರಾಮಪ್ಪ ದಂಪತಿ ಕುಟುಂಬ ಸಮೇತರಾಗಿ ಚಂಡಿಕಾ ಹವನ ಪೂರ್ಣಾಹುತಿಯಲ್ಲಿ ಭಾಗವಹಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟಾಕಪ್ಪ ಕಣ್ಣೂರು ಅವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ರಕ್ಷಿತಾ ಟಿ ಎಂ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಜಾತ್ರೆಯ ಅಂಗವಾಗಿ ತುಮರಿಯ ಸಿಗಂದೂರೇಶ್ವರಿ ಕಲಾ ತಂಡದಿಂದ ಜನಪದ ಗೀತಾ ಗಾಯನ, ಸ್ಥಳೀಯ ಭಜನಾ ಮಂಡಳಿ ತಂಡದಿಂದ ಭಜನೆ ನೆಡೆಯಿತು.

ಹರಿದು ಬಂದ ಭಕ್ತರು:
ಎರಡನೇ ದಿನದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು. ಅಕ್ಕಿ. ಬೆಲ್ಲ. ವಿವಿಧ ಸೇವೇ ನೀಡಿ ಹರಕೆ ಪೂಜೆ ಸಲ್ಲಿಸಿ. ಮುಡಿಗಂಧ ಪ್ರಸಾದ ಸ್ವೀಕರಿಸಿದರು.

ಅನ್ನ ದಾಸೋಹದಲ್ಲಿ ತುಂಬಿ ತುಳಿಕಿದ ಭಕ್ತರು.
ಮಧ್ಯಾಹ್ನ ದಾಸೋಹದಲ್ಲಿ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಪಡೆದರು. ಭಕ್ತಾದಿಗಳು ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ನಿರಂತರವಾಗಿ ಬೆಳಿಗ್ಗೆ. ಮಧ್ಯಾಹ್ನ. ಸಂಜೆ ದೇವಸ್ಥಾನ ಸಮಿತಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ಇಂದು ಸಂಜೆ 6 ಕ್ಕೆ ಪಟ್ಲ ಶತೀಶ್ ಶೆಟ್ಟರ ಭಾಗವತಿಕೆಯ ಪಾವಂಜೆ ಮೇಳದಿಂದ ‘ಶ್ರೀ ದೇವಿ ಲಲಿತೋಪಖ್ಯಾನ’ ಯಕ್ಷಗಾನ ಪ್ರದರ್ಶನ, ದೇವಸ್ಥಾನದಲ್ಲಿ ದುರ್ಗಾ ದೀಪ ನಮಸ್ಕಾರ ನೆಡೆಯಲಿದೆ. ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯಲಿದೆ.

ರಾತ್ರಿ 9ಗಂಟೆಗೆ ಮಹಾ ಮಂಗಳಾರತಿ ನಂತರ ಸಂಕ್ರಮಣ ಜಾತ್ರೆಯು ಸಂಪೂರ್ಣವಾಗಿ ಸಂಪನ್ನಗೊಂಡಿತು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ