ಮನೆ ಶಿವಮೊಗ್ಗ ಸೈಂಟ್ ಮಿಲಾಗ್ರಿಸ್ ಸಹಕಾರಿ ಆನಂದಪುರ ಶಾಖೆ ದಶಮಾನೋತ್ಸವ..!!

ಸೈಂಟ್ ಮಿಲಾಗ್ರಿಸ್ ಸಹಕಾರಿ ಆನಂದಪುರ ಶಾಖೆ ದಶಮಾನೋತ್ಸವ..!!

36
0

ಆನಂದಪುರ: ಕಾರವಾರ ಮೂಲದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಆನಂದಪುರ ಶಾಖೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಖಾ ಮ್ಯಾನೇಜರ್ ಸಂತೋಷ್ ಸುಧಾಕರ್ ಶೆಟ್ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಆರ್ಥಿಕ ಶಕ್ತೀಕರಣಕ್ಕೆ ಮಹತ್ವದ ಪಾತ್ರ ವಹಿಸುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಆನಂದಪುರ ಶಾಖೆ ಸದಸ್ಯರ ವಿಶ್ವಾಸ ಗಳಿಸಿ, ನಿಷ್ಠಾವಂತ ಸೇವೆಯ ಮೂಲಕ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಯ ಸಾಧನೆಗಳು, ಸದಸ್ಯರಿಗೆ ನೀಡಲಾಗುತ್ತಿರುವ ಸಾಲ ಹಾಗೂ ಉಳಿತಾಯ ಸೌಲಭ್ಯಗಳು, ಮುಂದಿನ ದಿನಗಳಲ್ಲಿ ಜಾರಿಗೊಳ್ಳಲಿರುವ ಹೊಸ ಯೋಜನೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಗಿರೀಶ್ , ಹಿರಿಯ ಸಿಬ್ಬಂದಿ ಅಶೋಕ್ ಕುಮಾರ್,ನಾಗರತ್ನ ಇನ್ನಿತರ ಸಿಬ್ಬಂದಿಗಳು ಉಪಸ್ಥಿರಿದ್ದರು.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ