ಮನೆ Blog ಸೊರಬ ಚಂದ್ರಗುತ್ತಿ ಕಡೆಜೋಳದ ಗುಡ್ಡೆಯಲ್ಲಿ 5ನೇ ವರ್ಷದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ..!!

ಸೊರಬ ಚಂದ್ರಗುತ್ತಿ ಕಡೆಜೋಳದ ಗುಡ್ಡೆಯಲ್ಲಿ 5ನೇ ವರ್ಷದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ..!!

37
0

ಸೊರಬ:ಕ್ರೀಡೆಯು ಯುವ ಸಮುದಾಯಕ್ಕೆ ಹೊಸ ಹುರುಪನ್ನು ನೀಡುತ್ತದೆ ಎಂದು ದಂತ ವೈದ್ಯರು ಸೊರಬ ಡಾ. ಜ್ಞಾನೇಶ್ ಹೆಚ್ ತಿಳಿಸಿದರು.

ಇವರು ಸೊರಬ ಚಂದ್ರಗುತ್ತಿ ಸಮೀಪದ ಕಡೆಜೋಳದ ಗುಡ್ಡೆಯಲ್ಲಿ ಗ್ರಾಮಸ್ಥರ ಸಹಯೋಗದಿಂದ ನಡೆದ 5ನೇ ವರ್ಷದ ಹೊನಲೂಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿ ಶ್ರೀ ನಾಗಚೌಡೇಶ್ವರಿ ಗೆಳೆಯರ ಬಳಗದಿಂದ ಮಂಗಳವಾರ ಆಯೋಜಿಸಲಾಯಿತು ಅಂಕಣ ಉದ್ಘಾಟನೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲಿಯಪ್ಪ ಗಾಡಿಗೇರ್ ವಹಿಸಿದ್ದರು ಹಾಗೆ ಈ ಸಂದರ್ಭದಲ್ಲಿ
ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳು ಶಿವಮೊಗ್ಗ ಶಿವಕುಮಾರ್ ಕಡಸೂರು,ರೇಣುಕಮ್ಮ ದೇವಸ್ಥಾನದ ಮಾಜಿ ಅಧ್ಯಕ್ಷರು ಪ್ರಸನ್ನ ಹೆಚ್ ಶೆಟ್ ಚಂದ್ರಗುತ್ತಿ,ಗ್ರಾಂ ಪಂ ಸದಸ್ಯರು ಚಂದ್ರಗುತ್ತಿ ಲೋಕೇಶ್ ಜೋಳದ ಗುಡ್ಡೆ ,ರಾಜು ಮಾವಿನಬಳ್ಳಿ ಕೊಪ್ಪ ಬಿಜೆಪಿ ಯುವ ಮೊರ್ಚ ಅಧ್ಯಕ್ಷರುವೆಂಕಟೇಶ್ ಪಿ ಎಲ್, ಲಕ್ಷ್ಮಣ ಜೆ ಉಪಸ್ಥಿತಿಯಲ್ಲಿದ್ದರು.

ಈ ಪದ್ಯಾಂಟಲ್ಲಿ ಮೊದಲ ಬಹುಮಾನ ಸ್ವಾಮಿ ಕೊರಗಜ್ಜ ಬೈಂದೂ‌ರ್ ಪಡೆದು ಕೊಂಡರು ದ್ವಿತೀಯ ಬಹುಮಾನ ಚೌಡೇಶ್ವರಿ ಐಗೋಡ್‌ ತೃತೀಯ BS ಭದ್ರಾಪುರ ಚತುರ್ಥ ಬಹುಮಾನ ಶ್ರೀ ನಾಗಚೌಡೇಶ್ವರಿ ಬಾಯ್ಸ್ ಕಡೇಜೋಳಗುಡ್ಡೆ ಪಡೆದು ಕೊಡಿದ್ದು ನಾಲ್ಕು ತಂಡಗಳಿಗೂ ಆಕರ್ಷಕ ಪಾರಿತೋಷಕ ನೀಡಲಾಯಿತು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t