ಮನೆ Blog ಸ್ವಾತಂತ್ರ್ಯ ದಿನಾಚರಣೆ ದಿನ ಬಂಧನಕ್ಕೆ ಒಳಗಾದ ರೈತರು..?. ...

ಸ್ವಾತಂತ್ರ್ಯ ದಿನಾಚರಣೆ ದಿನ ಬಂಧನಕ್ಕೆ ಒಳಗಾದ ರೈತರು..?. ಬಾರಂಗಿ ಹೋಬಳಿಯ ಗ್ರಾಮಗಳಿಗೆ ಸ್ವತಂತ್ರ ಸಿಕ್ಕಿಲ್ಲವೆಂದು ಹೋರಾಟ .. ಇದರ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು..

136
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.4215739, 0.47091675);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಆನಂದಪುರ:

ನಮ್ಮ ನಾಡಿಗೆ ಸ್ವತಂತ್ರ ಬಂದು 79 ವರ್ಷ ಆದರೂ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಕೆಲ ಗ್ರಾಮದ ಜನರಿಗೆ ಸ್ವಾತಂತ್ರ್ಯವೆಂಬುದು ಕನಸಾಗಿಯೇ ಉಳಿದಿದೆ ಎಂದು ಶಿವಮೊಗ್ಗ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರೇಶ್ ಬಾಳಗೋಡು ವಿರೋಧಿಸಿದರು.

ಇವರು ಸಾಗರದ ನಗಸಭೆ ಮುಂಭಾಗ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುವ ವೇಳೆ ಕೆಲ ಕಾಲ ಪೋಲಿಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಆನಂದಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ.

ಭಾರಂಗಿ ಹೋಬಳಿಯ ಸಾಲ್ನೋಡು, ಚೀಕನಹಳ್ಳಿ, ಉರುಳುಗಲ್ಲು, ಹೆಬ್ಬಾನಕೇರಿ, ಕಾನೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಕಳೆದ ಆರೂವರೆ ದಶಕಗಳಿಂದ ರಸ್ತೆ, ವಿದ್ಯುತ್, ಆಸ್ಪತ್ರೆ, ಶಾಲೆ ಮೊದಲಾದ ಮೂಲ ಸೌಕರ್ಯಗಳಿಂದ ವಂಚಿತ-ರಾಗಿದ್ದಾರೆ. ಅಲ್ಲಿನ ಗ್ರಾಮಸ್ಥರು ಕಾಡು ಪ್ರಾಣಿಗಳಂತೆ ಬದುಕುವಂತಾಗಿದೆ.ಅವರಿಗೆ ಇಂದಿಗೂ ಸಹ ಸ್ವಾತಂತ್ರ್ಯ ಲಭಿಸಲಿಲ್ಲ ಎಂದು ದೂಷಿಸಿದರು.

ಭಾರಂಗಿ ಹೋಬಳಿಯಲ್ಲಿ ಯಾರಿಗಾದರೂ ಕಾಯಿಲೆ ಬಂದರೆ ಜೋಳಿಗೆ ಕಟ್ಟಿಕೊಂಡು ಮೈಲುಗಟ್ಟಲೆ ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆತರಬೇಕಾದ ಪರಿಸ್ಥಿತಿ ಎಂದಿಗೂ ಇದೆ ಇದರ ಮುಕ್ತಿ ಯಾವಾಗ ಎಂದು ಪ್ರಶ್ನೆಸಿದರು.

ಹಲವು ಬಾರಿ ಅಲ್ಲಿನ ಗ್ರಾಮಗಳ ಪರವಾಗಿ ಧರಣಿ, ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಧ್ಯಮಗಳು ಲೇಖನಗಳ ಮೂಲಕ ಅಲ್ಲಿನ ಸಮಸ್ಯೆಗ-ಳನ್ನು ಎತ್ತಿ ತೋರಿಸಿದರೂ ಶಾಸಕರು ಹಾಗೂ ಅಧಿಕಾರಿಗಳು ಯಾವುದೇ ಗಮನಹರಿಸಲಿಲ್ಲ.

ಬಾರಂಗಿ ಹೋಬಳಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುವುದು. ಯಾವುದೇ ಕಾರಣಕ್ಕೂ ನಾವು ಹೋರಾಟದಿಂದ ಹಿಂದೆ ಹೋಗುವುದಿಲ್ಲ ಎಂದು ತಮ್ಮ ದೃಢ ನಿಲುವನ್ನು ವ್ಯಕ್ತಪಡಿಸಿದರು.

*ಇದರ ಬಗೆಗೆ ಪ್ರತಿಕ್ರಿಯಿಸಿದ ಶಾಸಕರು:*

ಬಾರಂಗಿ ಹೋಬಳಿಯ ಕೆಲ ಗ್ರಾಮದ ಸಮಸ್ಯೆ ನನ್ನ ಗಮನದಲ್ಲಿಯು ಇದೆ . ನಮ್ಮ ರಾಜ್ಯ ಸರಕಾರವು ಸಹ ಅಲ್ಲಿಗೆ 5.50 ಕೋಟಿ ಹಣ ಹಾಕಲು ಸಿದ್ಧವಿದೆ ಆದರೆ ಘಾರೇಸ್ಟ್ ಕ್ಲೀಯರೇನ್ಸ್ ಇಲ್ಲದೆ ನಾವು ಏನು ಮಾಡುವುದಕ್ಕೂ ಬರುವುದಿಲ್ಲ. ಹಾಗಾಗಿ ಫಾರೆಸ್ಟ್ ಕ್ಲಿಯರೆನ್ಸಿಗೆ ದೆಹಲಿಗೆ ಕಳಿಸಿದ್ದೇವೆ ಅದು ಬಂದ ಮೇಲೆ ನಾವು ಸರಿಪಡಿಸುತ್ತೇವೆ ಎಂದರು.

ತಾವು ಪ್ರಚಲಿತಕ್ಕೆ ಬರಬೇಕೆಂದು ರೈತ ಸಂಘಟನೆಗಳು ಸ್ವತಂತ್ರ್ಯ ದಿನಾಚರಣೆ ವೇಳೆ ಗಾಂಧಿ ಪ್ರತಿಮೆ ಮುಂದೆ ಕುಳಿತು ಸ್ವಾತಂತ್ರ್ಯ ಸಿಕ್ಕಿಲ್ಲವೆಂದು ಹೋರಾಟ ಮಾಡಿದ್ದು ತಪ್ಪು. ಸಂಭ್ರಮ ಆಚರಿಸುವ ದಿನ ಸಂಭ್ರಮಿಸಿ ಎಂದರು.