ಮನೆ Blog ಹರಮನ್ ಚಹಾವಾಲ ಅಂಗಡಿಯ ಉದ್ಘಾಟನೆ : ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು..!!

ಹರಮನ್ ಚಹಾವಾಲ ಅಂಗಡಿಯ ಉದ್ಘಾಟನೆ : ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು..!!

35
0

ಆನಂದಪುರ: ಪಟ್ಟಣದ ಶಿಕಾರಿಪುರ ರಸ್ತೆಯ ದಾಸಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಂಡ ಹರಮನ್ ಚಹಾವಾಲ ಅಂಗಡಿಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಅವರು ಶುಭ ಹಾರೈಸಿ ಉದ್ಘಾಟಿಸಿ ಮಾತನಾಡಿದರು.

ಯುವಕರು ಸ್ವಯಂ ಉದ್ಯೋಗದತ್ತ ಮುಖ ಮಾಡುವುದರಿಂದ ಸಮಾಜದ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಣ್ಣ ಉದ್ಯಮಗಳೇ ದೊಡ್ಡ ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ. ಪರಿಶ್ರಮ ಮತ್ತು ನಿಷ್ಠೆಯಿಂದ ಯಾವುದೇ ಉದ್ಯಮವನ್ನು ಮುನ್ನಡೆಸಿದರೆ ಖಂಡಿತವಾಗಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ಇಂದಿನ ಕಾಲದಲ್ಲಿ ಗ್ರಾಹಕರು ಗುಣಮಟ್ಟ, ಸ್ವಚ್ಛತೆ ಮತ್ತು ಉತ್ತಮ ಸೇವೆಯನ್ನು ಹೆಚ್ಚು ಗಮನಿಸುತ್ತಾರೆ. ಅಂಗಡಿಯಲ್ಲಿ ಶುದ್ಧ ನೀರು, ಸ್ವಚ್ಛವಾದ ವಾತಾವರಣ ಹಾಗೂ ಉತ್ತಮ ಗುಣಮಟ್ಟದ ಚಹಾ-ತಿಂಡಿಗಳನ್ನು ನೀಡುವುದರಿಂದ ಗ್ರಾಹಕರ ವಿಶ್ವಾಸವನ್ನು ಗಳಿಸಬಹುದು. ಒಮ್ಮೆ ವಿಶ್ವಾಸ ಮೂಡಿದರೆ ಗ್ರಾಹಕರೇ ವ್ಯಾಪಾರದ ಬೆಂಬಲಿಗರಾಗುತ್ತಾರೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ವ್ಯಾಪಾರಸ್ಥರು ಆಗಮಿಸುವ ಪ್ರದೇಶವಾಗಿರುವುದರಿಂದ ಎಲ್ಲರಿಗೂ ತಕ್ಕಂತೆ ರುಚಿಕರ ಹಾಗೂ ಕೈಗೆಟಕುವ ಬೆಲೆಯ ಪದಾರ್ಥಗಳನ್ನು ಒದಗಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಚಹಾ ಸವಿದ ವಿದ್ಯಾರ್ಥಿಗಳು..

ಹರಮನ್ ಚಹಾವಾಲ ಅಂಗಡಿಯ ಮಾಲೀಕ ಅತೀಕವುಲ್ಲಾ ಜಮಖಾನಿ ಮಾತನಾಡಿ, ನಮ್ಮಲ್ಲಿ ಅತ್ಯಂತ ಸ್ವಚ್ಛತೆಯಿಂದ ತಯಾರಿಸಲಾದ ಉತ್ತಮ ಬೆಲ್ಲದ ಟೀ, ಲೆಮನ್ ಟೀ, ಕೊಲ್ಡ್ ಕಾಫಿ ಹಾಗೂ ತಾಜಾ ಹಣ್ಣುಗಳಿಂದ ತಯಾರಿಸಲಾದ ಜ್ಯೂಸ್ ದೊರೆಯುತ್ತದೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

✒️..ಅಮಿತ್ ಆರ್ ,ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ನಲ್ಲಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ