ಹೊಸನಗರ:ಒಂದು ಹಳ್ಳಿ ಅಭಿವೃದ್ಧಿಯಾಗಬೇಕು ಎಂದರೆ ಅ ಊರಿನಲ್ಲಿ ಮೊದಲ ವಿದ್ಯಾಲಯ, ದೇವಾಲಯ, ಔಷದಾಲಯಗಳು ಸುಸ್ಥಿರವಾಗಿ ಇದ್ದರೆ ಮಾತ್ರ ಆ ಹಳ್ಳಿ ಮಾದರಿ ಎನಿಸಿಕೊಳ್ಳುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ವಾನ್ ಲಕ್ಶ್ಮೀನಾರಾಯಣ ತಿಳಿಸಿದರು.
ವಾರಂಬಳ್ಳಿಯ ಕಲ್ಯಾಣೇಶ್ವರ ದೇವಸ್ಥಾನದಲ್ಲಿ ನಡೆದ ಕಲ್ಯಾಣೇಶ್ವರ ದೇವರ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಹಳ್ಳಿಗಳ ಅಭಿವೃದ್ಧಿಯ ಹಿಂದೆ ಊರಿನವರ ಶ್ರಮ, ಒಗ್ಗಟ್ಟು ಇರಲೇಬೇಕು. ಹಾಗೆಯೇ ದೇವಸ್ಥಾನಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ದೇವಸ್ಥಾನ ಅಧ್ಯಕ್ಷ ಕೃಷ್ಣಮೂರ್ತಿ ಮಠದಜೆಡ್ಡು ಮಾತನಾಡಿ ಒಂದು ದೇವಸ್ಥಾನದ ನಿರ್ಮಾಣದ ಹಿಂದೆ ಪ್ರತಿಯೊಬ್ಬರ ಶ್ರಮ, ತ್ಯಾಗವಿರುತ್ತದೆ. ದೇವಸ್ಥಾನಗಳು ಚೆನ್ನಾಗಿದ್ದರೆ ಆ ಹಳ್ಳಿಯೂ ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮೊದಲ ವರ್ಷದ ‘ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯಿತು. ತ್ರಿಣಿವೆಯ ಆಯುಷ್ ವೈದ್ಯಾಧಿಕಾರಿ ಡಾ| ಪ್ರತಿಮಾ ಮತ್ತು ಗೋ ರಕ್ಷಕ ರಾಘವೇಂದ್ರ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಹಾಗೂ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸುಮಾರು 31 ಜನ ರಕ್ತದಾನವನ್ನು ಮಾಡಿದರು.

ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೌರವಾದ್ಯಕ್ಷ ಶಂಕರಪ್ಪ ಗೌಡ, ಗ್ರಾಮಪಂಚಾಯ್ತಿ ಸದಸ್ಯೆ ಹೂವಮ್ಮ ರಾಮಚಂದ್ರ, ನಾಗಪ್ಪ, ಶ್ರೀನಿವಾಸ್, ಸತೀಶ್, ರಾಘವೇಂದ್ರ ಬಲಗ, ನಾಗರಾಜ್ ಜೋಯಿಸ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









