ಮನೆ Blog ಹಾಲಪ್ಪ ನಾವು ತಂದ ಯೋಜನೆ ಸಹಿಸಲಾಗದ ಮಾತನಾಡುತ್ತಿದ್ದಾರೆ: ಗೋಪಾಲಕೃಷ್ಣ ಬೇಳೂರು..!!

ಹಾಲಪ್ಪ ನಾವು ತಂದ ಯೋಜನೆ ಸಹಿಸಲಾಗದ ಮಾತನಾಡುತ್ತಿದ್ದಾರೆ: ಗೋಪಾಲಕೃಷ್ಣ ಬೇಳೂರು..!!

209
0

ಆನಂದಪುರ:

ಹಾಲಪ್ಪನವರು ದುಡ್ಡು ಹೊಡಿಯೋಕೆ ಯೋಜನೆಗಳನ್ನೆಲ್ಲ ತರುತ್ತಿದ್ದರಿರಬೇಕು, ಅವನದು ಅದೇ ಕನಸಿರಬೇಕು ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು.

ಇವರು ನಿನ್ನೆ ಆನಂದಪುರ ಸುತ್ತಮುತ್ತಲಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು.

ಯಡ್ಯೂರಪ್ಪ ಹಾಗೂ ಹಾಲಪ್ಪನವರು ಹಣ ಹೊಡೆಯುವುದಕ್ಕೆ ಯೋಜನೆಗಳನ್ನೆಲ್ಲ ತರುತ್ತಿದ್ದರು ಈಗ ನಾವು ತಂದ ಯೋಜನೆಯನ್ನು ಸಹಿಸಲಾಗದೆ ಮಾತನಾಡುತ್ತಿದ್ದಾರೆ.

ಶರಾವತಿ ಪಂಪ್ ಸ್ಟೋರೇಜ್ ಯೋಜನೆಯಿಂದ ಆ ಪ್ರದೇಶದಲ್ಲಿ ವಾಸಿಸುವ ಐದಾರು ಮನೆಗಳು ಹೋಗುತ್ತದೆ ಅವರಿಗೆ ಸೂಕ್ತವಾದ ಪರಿಹಾರವನ್ನು ದೊರಕಿಸಿ ಕೊಡುತ್ತೇವೆ.

ಸಿಗಂದೂರು ಸೇತುವೆಯನ್ನು ನಾವು ಸ್ವಾಗತಿಸಿದ್ದೇವೆ, ಆದರೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ರಾಜ್ಯದ ಜನರಿಗೆ ಉಪಯೋಗವಾಗುವಂತಹ ಉತ್ತಮ ಯೋಜನೆಯಾಗಿದ್ದು ಇಂತಹ ಯೋಜನೆಯನ್ನು ವಿರೋಧಿಸುವುದು ತಪ್ಪು.ಈ ಯೋಜನೆ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ನಮ್ಮ ಅಮಿತ್ ಟೈಮ್ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕ್ಲಿಕ್ ಮಾಡಿ :https://chat.whatsapp.com/CnYYumPSez6AMYyw8cHG9A?mode=ac_t

ಫಾರೆಸ್ಟ್ ಕ್ಲಿಯರೆನ್ಸ್ ಸಹ ದೊರಕಿದೆ . ಇದರ ಬಗ್ಗೆ ಯಾರೇ ಮಾತನಾಡಿದರು ಸಹ ಯಾವುದೇ ಕಾರಣಕ್ಕೂ ನಿಲ್ಲಿಸುವ ಮಾತೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೇ ಚಂದ್ರಪ್ಪ, ಸಾಗರ ನಗರಸಭಾ ವಿರೋಧ ಪಕ್ಷ ನಾಯಕ ಗಣಪತಿ ಮಂಡಗಳಲೆ, ಗೌತಮಪುರ ಗ್ರಾಂ.ಪಂ ಅಧ್ಯಕ್ಷೆ ರೇಣುಕಾ ಹಾಗೂ ಮುಖಂಡರಾದ ಚೇತನ್ ರಾಜ್ ಕಣ್ಣೂರ್, ರಮಾನಂದ, ಉಮೇಶ್, ಗಜೇಂದ್ರ ಯಾದವ್, ಮಂಜುನಾಥ್ ದಾಸನ್ ಇನ್ನಿತರರು ಉಪಸ್ಥಿತರಿದ್ದರು.