ಮನೆ Blog ಹಾವು ಕಚ್ಚಿ ರೈತ ಸಾವು..

ಹಾವು ಕಚ್ಚಿ ರೈತ ಸಾವು..

133
0

ಆನಂದಪುರ:

ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ನಾಗರಹಾವು ಕಚ್ಚಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ವೀರೇಶ್ (40) ಸಾವನ್ನಪ್ಪಿರುವ ದುರ್ದೈವಿ. ವೀರೇಶ್ ರವರು ತಮ್ಮ ತೋಟದ ಕೆಲಸ ಮಾಡುತ್ತಿರುವಾಗ 12.45 ವೇಳೆಗೆ ಹಾವು ಕಚ್ಚಿದೆ ನಂತರ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಪರಿಶೀಲಿಸಿ ಮೃತಪಟ್ಟಿರೋದಾಗಿ ತಿಳಿಸಿರುತ್ತಾರೆ.

ಮೃತರಾದ ವೀರೇಶ್ ರವರು ಚೆನ್ನಕೊಪ್ಪದ ಶಾಂತಪ್ಪ ಗೌಡರ ಪುತ್ರರಾಗಿದ್ದು .ವೀರೇಶ್ ಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದಾರೆಂದು ತಿಳಿದು ಬಂದಿದೆ.ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.