ಮನೆ ರಾಜ್ಯ ಹಾಸನಾಂಬೆ ದರ್ಶನ ಸುಸೂತ್ರ: ಟಿಕೆಟ್ ಮಾರಾಟದಿಂದ ಕೋಟಿ ರೂಪಾಯಿ…..!!!

ಹಾಸನಾಂಬೆ ದರ್ಶನ ಸುಸೂತ್ರ: ಟಿಕೆಟ್ ಮಾರಾಟದಿಂದ ಕೋಟಿ ರೂಪಾಯಿ…..!!!

77
0

ಹಾಸನ: ಶ್ರೀ ಹಾಸನಾಂಬೆ ದರ್ಶನದ 2ನೇ ದಿನವಾದ ಶನಿವಾರದೇವಿಯ ಶೀಘ್ರ ದರ್ಶನದಿಂದ ಭಕ್ತರು ಹರ್ಷ ಚಿತ್ತರಾಗಿ ಶಿಸ್ತುಬದ್ಧ ದರ್ಶನ ವ್ಯವಸ್ಥೆಗೆ ಹರ್ಷ ವ್ಯಕ್ತಪಡಿಸಿದರು. ಸಚಿವ ಶಿವರಾಜ ಎಸ್‌. ತಂಗಡಗಿ ಕುಟುಂಬ ಸಮೇತರಾಗಿ ಹಾಗೂ ವಿಧಾನಸಭಾ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹಾಸನಾಂಬೆಯ ದರ್ಶನ ಪಡೆದರು.

ಹಾಸನಾಂಬೆ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದ ಭಕ್ತರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಮಾತನಾಡಿಸಿ ದರ್ಶನ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಆಲಿಸಿದರು. ವಿಶೇಷ ದರ್ಶನದ ಟಿಕೆಟ್ ಮಾರಾಟದಿಂದ ಶನಿವಾರ ಒಂದೇ ದಿನ ದೇವಾಲಯಕ್ಕೆ 1 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ. ಶನಿವಾರ ಮುಂಜಾನೆಯಿಂದ ಸಂಜೆ ವೇಳೆಗೆ 1000 ರೂ. ಟಿಕೆಟ್‌ನಿಂದ 65 ಲಕ್ಷ ರೂ., 300 ರೂ. ಟಿಕೆಟ್ ಮಾರಾಟದಿಂದ 35 ಲಕ್ಷ ರೂ.ಗೂ ಹೆಚ್ಚು ಆದಾಯ ಬಂದಿದೆ. ಶುಕ್ರವಾರ 67 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು.

ಬೆಳಗಿನ 2 ರಿಂದ 5 ಗಂಟೆಯವರೆಗೆ ಮುಚ್ಚದೆ ಇರಲು ನಿರ್ಧಾರ:

“ದರ್ಶನಕ್ಕೆ ಬಂದ ಜನರ ಸಂಖ್ಯೆ ದಾಖಲೆ ಮಟ್ಟವನ್ನು ತಲುಪಿದೆ. ಸಾಲಿನ ಜನರು ರಸ್ತೆಯವರೆಗೆ ನಿಂತಿದ್ದಾರೆ., ಆದರೆ ಎಲ್ಲರಿಗೂ ಸೂಕ್ತವಾಗಿ ಕಾಳಜಿ ವಹಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಚಿಂತಿಸಬೇಡಿ. ಪ್ರತಿಯೊಬ್ಬರೂ ದರ್ಶನ ಪಡೆಯುತ್ತಾರೆ. ಹೆಚ್ಚು ಜನರಿರುವುದರಿಂದ ನಾವು ಬೆಳಗಿನ 2 ರಿಂದ 5 ಗಂಟೆಯವರೆಗೆ ಮುಚ್ಚದೆ ಇರಲು ನಿರ್ಧರಿಸಿದ್ದೇವೆ. ಆದ್ದರಿಂದ ಎಲ್ಲರೂ ಹೆಚ್ಚು ವಿಳಂಬವಿಲ್ಲದೆ ದರ್ಶನ ಪಡೆಯಬಹುದು’ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t