
ಆನಂದಪುರ:
ಆನಂದಪುರ ಸಮೀಪದ ಮಲಂದೂರಿನಲ್ಲಿ ಆನಂದಪುರ ಗ್ರಾಮಪಂಚಾಯತಿಗೆ ಒಳಪಟ್ಟ ಕಸ ವಿಲೇವಾರಿ ಘಟಕ ಬೆಂಕಿ ತಗುಲಿ ಹೊತ್ತಿ ಉರಿದಿದೆ.
ಇದು ಮೂರನೇ ಬಾರಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿದ್ದು. ಇದರ ನಿರ್ವಹಣೆಯನ್ನು ಗ್ರಾಮ ಆಡಳಿತವು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲವೆಂಬ ಆರೋಪವನ್ನು ಸ್ಥಳೀಯರು ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ ಗುರುರಾಜ್ ಯಾರೋ ಕಿಡಿಗೇಡಿಗಳು ಬೇಕಂತಾನೆ ಈ ಬೆಂಕಿಯನ್ನು ಹಾಕಿದ್ದಾರೆ ಇವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು.
ಬೆಂಕಿ ತಗುಲಿ ಕಸ ವಿಲೇವಾರಿ ಘಟಕ ಅಂದಾಜು 1.5 ಲಕ್ಷ ನಷ್ಟ ವಾಗಿದೆ ಎಂದು ತಿಳಿಸಿದರು.
ಸಿ ಸಿ ಕ್ಯಾಮರಾ ಯಾಕೆ ಇಲ್ಲ ?..

ಕಸ ವಿಲೇವಾರಿ ಘಟಕಕ್ಕೆ ಆಗಾಗ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಾರೆ ಇದರಿಂದ ಅಪಾರವಾದ ನಷ್ಟ ವಾಗುತ್ತಿದೆ ಎಂದು ಹೇಳುವ ಗ್ರಾಮಾಡಳಿತವು ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಯಾಕೆ ನಿರ್ಲಕ್ಷ ತೋರಿತ್ತಿದೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಬೆಂಕಿ ನಂದಿಸಿದ ಅಗ್ನಿಶಾಮಕ ದಳ:

ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಯಶಸ್ವಿಯಾದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








