ಮನೆ Blog ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ನಗರ ಹೋಬಳಿಯಿಂದ ಪಾದಯಾತ್ರೆಗೆ ಹರಿದು ಬಂದ ಜನಸಾಗರ..!!

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ನಗರ ಹೋಬಳಿಯಿಂದ ಪಾದಯಾತ್ರೆಗೆ ಹರಿದು ಬಂದ ಜನಸಾಗರ..!!

9
0

✒️..ಅಮಿತ್ ಆರ್ ಆನಂದಪುರ

ಹೊಸನಗರ: ಹಲವು ಸಮಸ್ಯೆಗಳಿಂದ ತತ್ತರಿಸಿರುವ ಹೊಸನಗರ ಕ್ಷೇತ್ರ ಸಮಗ್ರ ಅಭಿವೃದ್ಧಿಯತ್ತ ಸಾಗಬೇಕಾದರೆ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಅಗತ್ಯವಾಗಿದೆ ಎಂದು ಜನಪ್ರತಿನಿಧಿಗಳು, ಮಠಾಧೀಶರು, ಧರ್ಮಗುರುಗಳು ಒಕ್ಕೊರಲ ಧ್ವನಿ ಮೊಳಗಿಸಿದರು.

ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆ ಶ್ರೀಮಹಾಗಣಪತಿ ಸನ್ನಿಧಿಯಲ್ಲಿ ಸಂಕಷ್ಠ ಹರ ಚತುರ್ಥಿಯ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಹೊಸನಗರ ವಿಧಾನಸಭಾ ಕ್ಷೇತ್ರ ಸ್ತಬ್ಧ ಚಿತ್ರಕ್ಕೆ ಚಾಲನೆ ಮೂಲಕ ಪಾದಯಾತ್ರೆಗೆ ಅನುವು ಮಾಡಿ ಕೊಡಲಾಯಿತು.

ಶಾಸಕ ಆರಗ ಜ್ಞಾನೇಂದ್ರ, ಹೊಸನಗರ ಕ್ಷೇತ್ರ ಕಳೆದು ಹೋಗುವ ಸಂದರ್ಭದಲ್ಲೂ ವಿರೋಧಿಸಲಾಗಿತ್ತು. ಆದರೆ ಫಲಕಾರಿ ಆಗಲಿಲ್ಲ. ಇದೀಗ ಕ್ಷೇತ್ರಕ್ಕಾಗಿ ನಗರ ಹೋಬಳಿಯಿಂದ ನಿರೀಕ್ಷೆಗೂ ಮೀರಿ ಹೋರಾಟದ ಕಿಚ್ಚು ಹತ್ತಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.


ಶಾಸಕ ಬೇಳೂರು ಗೋಪಾಲಕೃಷ್ಣ, ಹೊಸನಗರ ನಾಡಿಗಾಗಿ ಎಲ್ಲವನ್ನು ಕೊಟ್ಟಿದೆ. ಆದರೆ ಪೂರಕ‌ ನ್ಯಾಯ ದೊರಕಿಲ್ಲ. ಕ್ಷೇತ್ರಕ್ಕಾಗಿ ನಡೆಯುವ ಹೋರಾಟಕ್ಕೆ ತನುಮನ ಧನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಾಗೂ ಹರತಾಳು ಹಾಲಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ‌.ಮಂಜುನಾಥ ಗೌಡ, ಕಲಗೋಡು ರತ್ನಾಕರ್, ಬೆಂಬಲ ಘೋಷಿಸಿದರು.

ಸಾನ್ನಿಧ್ಯ ವಹಿಸಿದ್ದ ಮೂಲೆಗದ್ದೆ ಶ್ರೀಗಳು, ಪಾದಯಾತ್ರೆ ಚಾಲನೆಗೆ ನಗರ ಹೋಬಳಿಯ ಜನ ಸೇರಿದ್ದು ನೋಡಿದರೆ ಇಲ್ಲಿಯ ನೋವು ಸಮಸ್ಯೆ ಎಷ್ಟಿದೆ ಎಂದು ಅರ್ಥವಾಗುತ್ತದೆ. ಅಲ್ಲದೆ ಹೋರಾಟದಲ್ಲಿ ಧರ್ಮಾತೀತ, ಪಕ್ಷಾತೀತ, ಜಾತ್ಯಾತೀತವಾಗಿ ಒಗ್ಗಟ್ಟು ಪ್ರದರ್ಶನ ಕಂಡುಬಂದಿದ್ದು ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.

96 ವರ್ಷದ ಶಾಸಕರ ಪಾದಯಾತ್ರೆ:


ಮಾಜಿ ಶಾಸಕ, 96 ವರ್ಷದ ಹಿರಿಯ ರಾಜಕಾರಣಿ, ಬಿ.ಸ್ವಾಮಿರಾವ್ ಪಾದಯಾತ್ರೆಯ ಮೊದಲ ದಿನ 18 ಕಿಮೀ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಬೇಡ ಸರ್ ವಾಹನದಲ್ಲಿ ಹೋಗೋಣ ಎಂದರು ಕೇಳದೆ ಪಾದಯಾತ್ರೆ ನನ್ನ ಸಂಕಲ್ಪ.. ಹೆಜ್ಜೆ ಹಾಕಿಯೇ ಸಿದ್ದ ಎಂದು ನಗರದಿಂದ ಹೊಸನಗರದ ವರೆಗೆ ನಡೆದೇ ಬಂದರು.

ಎತ್ತಿನಗಾಡಿ ವಿಶೇಷ:


ಪಾದಯಾತ್ರೆಗೆ ಕರಿಮನೆ ಗ್ರಾಪಂಯ ನೂರಾರು ಜನ ನೂಲಿಗ್ಗೇರಿಯಿಂದ ಎತ್ತಿನಗಾಡಿ ಸಮೇತ ಬಂದು ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪಾದಯಾತ್ರೆ ದಾರಿಯುದ್ದಕ್ಕು ಬಾಳೆಹಣ್ಣು, ಶರಬತ್ತು, ಐಸ್ ಕ್ರೀಂ, ನೇರಳೆ ಹಣ್ಣು, ಸೇರಿದಂತೆ ವಿವಿಧ ತಿನಿಸುಗಳನ್ನು ಪಾದಚಾರಿಗಳಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಿಟ್ಟೂರು ಗರ್ತಿಕೆರೆ ಶ್ರೀಗಳು, ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಎನ್.ಆರ್.ದೇವಾನಂದ್, ಕೆ.ವಿ.ಕೃಷ್ಣಮೂರ್ತಿ, ಆಲುವಳ್ಳಿ ವಿರೇಶ್, ರಮೇಶ ಹಲಸಿನಹಳ್ಳಿ, ಕರುಣಾಕರ ಶೆಟ್ಟಿ, ಸುಮಾ ಸುಬ್ರಹ್ಮಣ್ಯ, ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಸತೀಶ್, ಅಂಬ್ರಯ್ಯಮಠ, ಚಕ್ರವಾಕ ಸುಬ್ರಹ್ಮಣ್ಯ, ಸುಧೀಂದ್ರ ಪಂಡಿತ್, ಆರ್.ಎ.ಚಾಬುಸಾಬ್, ವರ್ತೇಶ್, ನಗರ ನಿತಿನ್, ಮುಸ್ಲೀಂ, ಕ್ರೈಸ್ತ ಧರ್ಮಗುರುಗಳು, ವಿವಿಧ ಪಕ್ಷಗಳ ಅಧ್ಯಕ್ಷರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ನಗರ ಹೋಬಳಿಯ 9 ಗ್ರಾಪಂಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಪತ್ರಕರ್ತ ರವಿ ಬಿದನೂರು ಕಾರ್ಯಕ್ರಮ ನಿರ್ವಹಿಸಿದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t