ಮನೆ Blog 75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ವೈಯಕ್ತಿಕ ಹಣ ಸಹಾಯ ಮಾಡಿದ ರತ್ನಾಕರ ಹೊನಗೋಡು..!!

75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ವೈಯಕ್ತಿಕ ಹಣ ಸಹಾಯ ಮಾಡಿದ ರತ್ನಾಕರ ಹೊನಗೋಡು..!!

135
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಆನಂದಪುರ:

ಪ್ರತಿ ವರ್ಷದಂತೆ ಈ ವರ್ಷವೂ ಸಹ 75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ವೈಯಕ್ತಿಕವಾಗಿ ಸಹಕಾರ ನೀಡಿರುವುದಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ತಿಳಿಸಿದರು.

ಇವರು ಇಂದು ಆನಂದಪುರದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಆನಂದಪುರ, ಗೌತಮಪುರ, ತ್ಯಾಗರ್ತಿ, ಹೊಸೂರು, ಎಡೇಹಳ್ಳಿ,ಆಚಾಪುರ, ಪಂಚಾಯಿತಿ ವ್ಯಾಪ್ತಿಗಳಲ್ಲಿ ಗಣಪತಿಯನ್ನು ಇಡುವ ಸಂಘಗಳಿಗೆ ವೈಯಕ್ತಿಕ ಧನ ಸಹಾಯ ಮಾಡಿ ಮಾತನಾಡಿದರು.

ಶಾಂತಿ ಸೌಹಾರ್ದತೆಯಿಂದ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಅದ್ದೂರಿಯಾಗಿ ಗಣಪತಿ ಹಬ್ಬವನ್ನು ಆಚರಿಸಿ ಎಂದು ನೆರೆದಿದ್ದ ಗಣಪತಿ ಸಂಘಗಳಿಗೆ ಸಲಹೆ ನೀಡಿದರು.

ನಾನು 25 ವರ್ಷಗಳಿಂದ ಗಣಪತಿ ಹಬ್ಬಕ್ಕೇ ಗಣಪತಿ ಸಂಘಗಳಿಗೆ ವೈಯಕ್ತಿಕವಾಗಿ ಸಹಕಾರವನ್ನು ನೀಡುತ್ತಾ ಬಂದಿದೆ. ಈ ವರ್ಷವೂ ಸಹ ಎಲ್ಲಾ ಗಣಪತಿ ಸಂಘಗಳಿಗೂ ಒಂದುಗೂಡಿಸಿ ಮುಂಜಾಗ್ರತ ಕ್ರಮವಾಗಿ ಶಾಂತಿ ಸಭೆ ನಡೆಸಿ ವೈಯಕ್ತಿಕ ಧನ ಸಹಾಯ ಮಾಡಿದ್ದೇನೆ.

ನಾನು ಪ್ರಚಾರಕ್ಕೆ ಇಷ್ಟಪಡುವುದಿಲ್ಲ:

ದಯವಿಟ್ಟು ಗಣಪತಿ ಸಂಘಗಳು ನಾನು ಧನಸಹಾಯ ಮಾಡಿದ್ದೇನೆಂದು ಎಲ್ಲೂ ಸಹ ಪ್ರಚಾರ ಮಾಡಬೇಡಿ. ಯಾವುದೇ ರೀತಿಯ ಕರಪತ್ರಗಳಿಗೆ ನನ್ನ ಹೆಸರನ್ನು ಹಾಕಬೇಡಿ ಒಮ್ಮೆಲೆ ಹಾಕಿದರೆ ಅಂತಹ ಸಂಘಗಳಿಗೆ ಮುಂದಿನ ವರ್ಷ ಗಣಪತಿ ಹಬ್ಬಕ್ಕೇ ಸಹಾಯವನ್ನು ಮಾಡುವುದಿಲ್ಲ ಎಂದು ತಿಳಿಸಿದರು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ಗಣಪತಿ ಸಂಘಗಳು ಆದಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿ ಗಣಪತಿ ಹಬ್ಬವನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದಗಳನ್ನು ಮಾಡಿಕೊಡಬಾರದು ಎಂದು ನೆರೆದಿದ್ದ ಗಣಪತಿ ಸಂಘದ ಸದಸ್ಯರಿಗೆ ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗಣಪತಿ ಸಂಘಗಳ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.

ನಮ್ಮ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t