ಮನೆ Blog ಸುಳ್ಳು ಸುದ್ದಿ ಸೃಷ್ಟಿಸಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಐ.ಜಿ.ಪಿ ಗೆ ಮನವಿ.

ಸುಳ್ಳು ಸುದ್ದಿ ಸೃಷ್ಟಿಸಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಐ.ಜಿ.ಪಿ ಗೆ ಮನವಿ.

36
0

ಶಿವಮೊಗ್ಗ:- ನಗರದಲ್ಲಿ ಅನಗತ್ಯವಾಗಿ ಸುಳ್ಳು ಊಹಾಪೋಹ ಸುದ್ದಿಗಳನ್ನು ಸೃಷ್ಟಿಸಿ ಶಾಂತಿ ಕದಡುವಂತಹ ಪ್ರಯತ್ನ ಮಾಡುತ್ತಿರುವವರು ಯಾರೇ ಆಗಿದ್ದರು ಅಂತವರ ಮೇಲೆ ಕಠಿಣವಾದ ಕ್ರಮ ಜರುಗಿಸಿ ಎಂದು ಶಾಂತಿಗಾಗಿ ನಡಿಗೆ ಸಂಘಟನೆ ಐ.ಜಿ.ಪಿ ರವಿ ಕಾಂತೇಗೌಡ ರವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ನಗರದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು” ಶಾಂತಿಗಾಗಿ ನಡಿಗೆ” ಸಮಿತಿಯ ಮುಖಂಡರು ಐ.ಜಿ.ಪಿ. ರವಿ ಕಾಂತೇಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ. ಗುರುಮೂರ್ತಿ ಶಿವಮೊಗ್ಗ, ಶಾಂತಿ ನಡಿಗೆ ಸಮಿತಿಯ ಸಂಚಾಲಕರು ಮತ್ತು ವಕೀಲರಾದ ಕೆ.ಪಿ ಶ್ರೀಪಾಲ, ಮಂಜುನಾಥ್ ನವುಲೆ, ಮಾಲತೇಶ ಬೊಮ್ಮನಕಟ್ಟೆ, ರಫೀ, ಪ್ರೊಫೆಸರ್ ಚಂದ್ರಪ್ಪ ಜೋಗಿ, ಡಿಎಸ್ಎಸ್ ತಾಲೂಕು ಸಂಚಾಲಕರಾದ ಎಂ. ರಮೇಶ್ ಚಿಕ್ಕಮರಡಿ, ನಗರ ಸಂಚಾಲಕರಾದ ಹರಿಗೆ ರವಿ ಇನ್ನಿತರ ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t