ಶಿವಮೊಗ್ಗ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜ.25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಶಿವಮೊಗ್ಗದ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿಯ ಪಶು ಆಸ್ಪತ್ರೆ ಆವರಣದಲ್ಲಿ ಸಾಕು ನಾಯಿಗಳ ಪ್ರದರ್ಶವನ್ನು ಏರ್ಪಡಿಸಲಾಗಿದೆ.
ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿಗೆ ಜ.22 ಕಡೆಯ ದಿನವಾಗಿದ್ದು ನೋಂದಣಿ ಶುಲ್ಕ ರೂ.200 ಕಡ್ಡಾಯವಾಗಿರುತ್ತದೆ. 6 ತಿಂಗಳ ಒಳಗಿನ ವಯಸ್ಸಿನ ಶ್ವಾನಗಳಿಗೆ ಅವಕಾಶವಿಲ್ಲ.
ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿರುವುದಿಲ್ಲ. ಇತರೆ ನಿಬಂಧನೆಗಳಿದ್ದು, ನೋಂದಣಿಗಾಗಿ ಡಾ.ಪ್ರಸನ್ನ ಕೆ ಎಂ (9343464008), ಡಾ. ಶಿವರಾಜ್ (9448318878), ಡಾ. ಕೆಂದೇಶ್ (9880043904) ಅಥವಾ ರಾಜೇಂದ್ರ ಕಾಮತ್ (9902191333) ಅವರನ್ನು ಸಂಪರ್ಕಿಸಬಹುದಾಗಿದೆ.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









