ಮನೆ Blog ತಾಲ್ಲೂಕು ಮಟ್ಟದಿಂದ ಕ್ರೀಡಾಶಾಲೆ,ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ..!!

ತಾಲ್ಲೂಕು ಮಟ್ಟದಿಂದ ಕ್ರೀಡಾಶಾಲೆ,ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ..!!

15
0

ಶಿವಮೊಗ್ಗ.ಜ.14 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುತ್ತಿರುವ ಜಿಲ್ಲಾ ಕ್ರೀಡಾಶಾಲೆಗೆ 2026-27 ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಆಯ್ಕೆಯನ್ನು ನಡೆಸಲಾಗುವುದು

ಅಥ್ಲೆಟಿಕ್ಸ್, ಹಾಕಿ, ಫುಟ್‌ಬಾಲ್, ಕುಸ್ತಿ ಕ್ರೀಡೆಗಳಲ್ಲಿ ಆಯಾ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಜ.16 ರಂದು ತೀರ್ಥಹಳ್ಳಿ ತಾಲ್ಲೂಕಿಗೆ ಸ.ಪ.ಪೂ ಕಾಲೇಜು, ತೀರ್ಥಹಳ್ಳಿ, ಸಾಗರ ತಾಲ್ಲೂಕಿಗೆ ಸಾಗರ ತಾಲ್ಲೂಕು ಕ್ರೀಡಾಂಗಣ, ಹೊಸನಗರ ತಾಲ್ಲೂಕಿಗೆ ಹೊಸನಗರ ತಾಲ್ಲೂಕು ಕ್ರೀಡಾಂಗಣ. ಆ.19 ರಂದು ಸೊರಬ ತಾಲ್ಲೂಕಿಗೆ ಸ.ಪ.ಪೂ ಕಾಲೇಜು ಆನವಟ್ಟಿ, ಶಿಕಾರಿಪುರ ತಾಲ್ಲೂಕಿಗೆ ಶಿಕಾರಿಪುರ ತಾಲ್ಲೂಕು ಕ್ರೀಡಾಂಗಣ. ಭದ್ರಾವತಿ ತಾಲ್ಲೂಕಿಗೆ ಕನಕ ಮಂಟಪ ಮೈದಾನ ಭದ್ರಾವತಿ. ಹಾಗೂ ಜ.24 ರಂದು ಶಿವಮೊಗ್ಗ ತಾಲ್ಲೂಕಿಗೆ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆಯ್ಕೆ ನಡೆಸಲಾಗುವುದು.

ವಿದ್ಯಾರ್ಹತೆ ಏನು..?

2026-27ನೇ ಸಾಲಿಗೆ 5ನೇ ತರಗತಿಗೆ, 8ನೇ ತರಗತಿಗೆ ಮತ್ತು ಪ್ರಥಮ ಪಿ.ಯು.ಸಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಮಾಡುತ್ತಿರುವ ತರಗತಿಯ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆಯ ದಿನದಂದು ಕಡ್ಡಾಯವಾಗಿ ತಮ್ಮೊಂದಿಗೆ ತರತಕ್ಕದ್ದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ತಿಳಿಸಿದ್ದಾರೆ.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ