ಮನೆ ಶಿವಮೊಗ್ಗ ವ್ಯವಹಾರಿಕ ಜ್ಞಾನದ ವೃದ್ಧಿಗೆ ಮಕ್ಕಳ ಸಂತೆ ಸಹಾಯಕ :ಯುವ ರೈತ ಮೋರ್ಚಾದ ಸದಸ್ಯ ಸಂತೋಷ್..!

ವ್ಯವಹಾರಿಕ ಜ್ಞಾನದ ವೃದ್ಧಿಗೆ ಮಕ್ಕಳ ಸಂತೆ ಸಹಾಯಕ :ಯುವ ರೈತ ಮೋರ್ಚಾದ ಸದಸ್ಯ ಸಂತೋಷ್..!

8
0

ಸಾಗರ:ಶಾಲೆಯಲ್ಲಿ ಮಕ್ಕಳ ಸಂತೆ ಮಾಡುವುದರಿಂದ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಯಾಗಲು ಸಹಾಯಕ ವಾಗಿರುತ್ತದೆ ಎಂದು ಯುವ ರೈತ ಮೋರ್ಚಾದ ಸದಸ್ಯರಾದ ಸಂತೋಷ್ ಹೇಳಿದರು.

ಸಾಗರ ತಾಲ್ಲೂಕಿನ ಗೌತಮಪುರ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಜಿ ಆರ್ ಮೆಮೋರಿಯಲ್ ಹೈಸ್ಕೂಲ್ಸ್ ಅವರಣದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದರು.

ಮಕ್ಕಳು ಕಲಿಕೆ ಯೊಂದಿಗೆ ವ್ಯವಹಾರಿಕ ಜ್ಞಾನ, ಹಣದ ಮೌಲ್ಯವನ್ನು ಅರಿಯಲು ಮಕ್ಕಳಿಗೆ ಇಂತಹ ಮಕ್ಕಳ ಸಂತೆ ಬಹಳಷ್ಟು ಸಹಾಯಕವಾಗುತ್ತದೆ ಎಂದರು.

ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ನಾಗರತ್ನ ಎಸ್.ಕೆ ಮಾತನಾಡಿ ಮಕ್ಕಳು ಸ್ವತಃ ಬೆಲೆ ನಿಗದಿಪಡಿಸುವುದು, ಹಣ ನಿರ್ವಹಣೆ ಮಾಡುವುದು, ಲಾಭ-ನಷ್ಟದ ಲೆಕ್ಕಾಚಾರ ಹಾಕುವುದನ್ನು ಮಕ್ಕಳ ಸಂತೆ ಇಂದ ಕಲಿಯುತ್ತಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಯುವ ರೈತ ಮೋರ್ಚಾದ ಸದಸ್ಯರಾದ ಗಿರೀಶ್, ಯೋಮ ಕೇಶ್, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ನಾಗರತ್ನ ಎಸ್.ಕೆ. ಮುಖ್ಯೋ ಪಾಧ್ಯಾಯರಾದ ಸುನಿತಾ ಹೆಗಡೆ, ಸಹ ಶಿಕ್ಷಕರು ಹಾಗೂ ಪೋಷಕರು ಭಾಗಿಯಾಗಿದ್ದರು.

ಮಕ್ಕಳು ಉತ್ಸಾಹದಿಂದ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದು ತಮ್ಮಲ್ಲಿ ಬೆಳೆದಿರುವ ತರಕಾರಿ, ಹಣ್ಣು, ವಿವಿಧ ತಿಂಡಿ ತಿನಿಸುಗಳು, ತಂಪು ಪಾನೀಯಗಳನ್ನು ಮಾರಾಟ ಮಾಡಿ ಆನಂದಿಸಿದರು.

✒️….ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ