ಶಿವಮೊಗ್ಗ : ದೇಶದಲ್ಲಿ ಮುಂದೆ ನಡೆಯಲಿರುವ ಓಲಂಪಿಕ್, ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ನಾಡಿನ ಕ್ರೀಡಾಪ್ರತಿನಿಧಿಗಳು ಭಾಗವಹಿಸಿ, ನಾಡಿನ ಕೀರ್ತಿ ಪತಾಕೆಯನ್ನು ಹಾರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಸರ್ಕಾರಿ ನೌಕರ ಪ್ರತಿಭಾ ವಂತ ಕ್ರೀಡಾಪಟುಗಳಿಗೆ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಪಂ, ಕ್ರೀಡಾ ಇಲಾಖೆ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ದಿನನಿತ್ಯ ಒಂದಿಲ್ಲೊಂದು ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಕೆಲಸದಲ್ಲಿಯೇ ಕಳೆದುಹೋಗುತ್ತದೆ. ಕುಟುಂಬಕ್ಕಾಗಲೀ, ತಮ್ಮ ಆರೋಗ್ಯಕ್ಕಾಗಲೀ ಸಮಯ ಕೊಡುವುದು ನಿರೀಕ್ಷಿಸಿದಂತೆ ಸಾಧ್ಯವಾಗುವುದಿಲ್ಲ. ಇಂತಹ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿ ಸುವುದರಿಂದ ಪ್ರತಿಭಾವಂತ ನೌಕರರಿಗೆ ಮಾನಸಿಕ ನೆಮ್ಮದಿ, ಉಲ್ಲಾಸ ದೊರೆಯುವುದಲ್ಲದೇ ದೈಹಿಕ ಚೈತನ್ಯ ಹೆಚ್ಚಿ, ಕಾರ್ಯದಲ್ಲಿ ನವೋಲ್ಲಾಸ ಹೆಚ್ಚಲಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ ಎಲ್ಲರಲ್ಲಿಯೂ ಕ್ರೀಡಾ ಮನೋಭಾವ ಮುಖ್ಯವಾಗಿದೆಖೇಲೋ ಇಂಡಿಯ ಕಲ್ಪನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅದ್ಭುತ ಕಲ್ಪನೆಯಾಗಿದೆ. ಇದರಿಂದಾಗಿ ರಾಷ್ಟ್ರದಲ್ಲಿ ಅನೇಕ ಪ್ರತಿಭಾವಂತ ಕೀಡಾಪಟುಗಳು ಸೃಜಿಸಲು ಕಾರಣವಾಗಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದಿಂದ ಭದ್ರಾವತಿಯ ಅವಳಿ ಕಾರ್ಖಾನೆಗಳ ಉಳಿವು-ಬೆಳವಣಿಗೆಗೆ ಅಗತ್ಯ ವಾಗಿರುವ ಎಲ್ಲಾ ರೀತಿಯ ಕ್ರಮ ವಹಿಸುತ್ತಿದ್ದಾರೆ. ಅಂತೆಯೇ ಕಾರ್ಖಾನೆಗಳ ಆವರಣದೊಳಗೆ ಬೃಹತ್ ಪ್ರಮಾಣದ ಎಲ್ಲಾರೀತಿಯ ಕ್ರೀಡಾಂಗಣಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ಆಯೋಚಿಸಲು ಸಾಧ್ಯ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಕ್ರೀಡೆ ಮನೋರಂಜನೆಗೆ ಮಾತ್ರ ವಲ್ಲ, ಪ್ರತಿಭೆಯ ಅನಾವರಣಕ್ಕೆ, ಪರಿಪಕ್ವತೆಗೆ ಸಹಕಾರಿಯಾಗಿದೆ ಎಂದರು.
ಕಾಠ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ರಾಜ್ಯ ಕೈಮಗ್ಗ ಮತ್ತು ಮೂಲಸೌಲ್ಯ ಮಂಡಳಿ ಅಧ್ಯಕ್ಷ ಚೇತನ್‌ಗೌಡ, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಉಪವಿಭಾಗಾಧಿಕಾರಿ ಸತ್ಯನಾರಾ ಯಣ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಆರ್.ಪಾಪಣ್ಣ, ಸಿದ್ಧಬಸಪ್ಪ, ದಿನೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









